ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಯುಕ್ತ ಹುದ್ದೆಗೆ ಅಜಿತ್ ಹೆಗ್ಡೆ, ದಯಾನಂದ್ ಪೈಪೋಟಿ

Lingaraj Badiger
Updated On : 13 Jun 2013, 11:46 am

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರವಾದ ಆಯುಕ್ತರ ಹುದ್ದೆಗೆ ಇನ್ನೂ ನೇಮಕ ಆಗಿಲ್ಲ. ಈ ಮಧ್ಯೆ ಆಯುಕ್ತ ಹುದ್ದೆಗೆ ಮಂಗಳೂರು ನಗರ ಯೋಜನಾ ಪ್ರಾಧಿಕಾರ (ಮೂಡಾ) ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಇವರ ಜತೆಗೆ ಅಪರ ಜಿಲ್ಲಾಧಿಕಾರಿ ದಯಾನಂದ್ ಹೆಸರೂ ಚಾಲ್ತಿಯಲ್ಲಿದೆ.
 ಅಜಿತ್ ಕುಮಾರ್ ಹೆಗ್ಡೆ 4 ವರ್ಷ ಹಿಂದೆ ಮಹಾನಗರ ಪಾಲಿಕೆ ಜಂಟಿ ಆಯುಕ್ತರಾಗಿದ್ದರು. ಒಂದೂವರೆ ವರ್ಷ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದು ಬಿಟ್ಟರೆ, ಕಳೆದ ವರ್ಷ ಪಿಲಿಕುಳ ನಿಸರ್ಗಧಾಮ ನಿರ್ದೇಶಕರಾಗಿದ್ದರು. ಪ್ರಸ್ತುತ ಮೂಡಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 ಪಾಲಿಕೆ ಆಯುಕ್ತರಾಗಿದ್ದ ಡಾ.ಹರೀಶ್ ಕುಮಾರ್ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯ ಆಪ್ತ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವುದರಿಂದ ಆಯುಕ್ತರ ಹುದ್ದೆ ಖಾಲಿ ಬಿದ್ದಿದೆ. ಸದ್ಯಕ್ಕೆ ಜಂಟಿ ಆಯುಕ್ತರೇ ಪ್ರಭಾರ ಕಾರ್ಯನಿರ್ವಹಿಸುತ್ತಿದ್ದಾರೆ. ಆಯುಕ್ತರ ಹುದ್ದೆಗೆ ಕಣ್ಣಿಟ್ಟಿರುವ ಅಜಿತ್ ಕುಮಾರ್ ಹೆಗ್ಡೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವ ಬಳಸಿ ಆದೇಶ ಹೊರಡಿಸುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅಪರ ಜಿಲ್ಲಾಧಿಕಾರಿಯಾಗಿರುವ ದಯಾನಂದ್ ಕೂಡ ಆಯುಕ್ತ ಹುದ್ದೆಯ ಆಕಾಂಕ್ಷಿಯಾಗಿದ್ದು, ಯಾರ ಪ್ರಭಾವವೂ ಇಲ್ಲದೆ ನೇಮಕಾತಿಯ ಆಶಾವಾದದಲ್ಲಿದ್ದಾರೆ. ದಯಾನಂದ್ ಚಿಕ್ಕಮಗಳೂರಿನಲ್ಲಿ ಸಹಾಯಕ ಕಮೀಷನರ್ ಆಗಿದ್ದು, ಕಳೆದ 2 ವರ್ಷದಿಂದ ಅಪರ ಜಿಲ್ಲಾಧಿಕಾರಿಯಾಗಿದ್ದಾರೆ.  ಆಯುಕ್ತರ ನೇಮಕಾತಿಯಲ್ಲಿ ತೀವ್ರ ಪೈಪೋಟಿ ಇದ್ದು, ಯಾರು ಆಯುಕ್ತರಾಗುತ್ತಾರೆ ಎಂಬುದು ಕುತೂಹಲ ಘಟ್ಟದಲ್ಲಿದೆ. ಶೀಘ್ರವೇ ಆಯುಕ್ತರನ್ನು ನೇಮಿಸಲಾಗುವುದು ಎಂದು ಸಚಿವರು ಭರವಸೆ ನೀಡುತ್ತಲೇ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement