ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂ.ಆರ್. ವಾಸುದೇವ ಆಯ್ಕೆ

Lingaraj Badiger
Updated On : 13 Jun 2013, 11:45 am

ಮಂಗಳೂರು: ಸಂಗೀತ ಪರಿಷತ್ ಸಂಸ್ಥೆ ಅಧ್ಯಕ್ಷರಾಗಿ ಎಂ.ಆರ್. ವಾಸುದೇವ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷ- ಜಿ. ಮಂಜುನಾಥ ಭಟ್, ಕಾರ್ಯದರ್ಶಿ- ಸುಬ್ರಹ್ಮಣ್ಯ ರಾವ್, ಜತೆ ಕಾರ್ಯದರ್ಶಿ- ವಿ. ಕೃಷ್ಣಮೂರ್ತಿ, ಕೋಶಾಧಿಕಾರಿ- ಪ್ರದೀಪ್, ಸದಸ್ಯರಾಗಿ ತಾರಾನಾಥ್, ರಂಗನಾಥ್, ರಮೇಶ್ ರಾವ್, ತಿಲಕನ್, ಕೆ. ಹರೀಶ್, ಕುಮಾರ ಸುಬ್ರಹ್ಮಣ್ಯ ಭಟ್, ನಾಗೇಶ್ ರಾವ್, ವಿಶಾಲಾಕ್ಷಿ, ಸುಜಾತ ಹೆಗ್ಡೆ, ಅಂಜನಾ ಆಯ್ಕೆಯಾಗಿದ್ದಾರೆ.

16 ರಂದು ರೇಕಿ ಶಿಬಿರ
ಮಂಗಳೂರು: ಡಿವೈನ್ ಹೀಲಿಂಗ್ ಫೌಂಡೇಶನ್ ವತಿಯಿಂದ ಜೂ. 16 ರಂದು ಕೆನರಾ ಪದವಿ ಕಾಲೇಜಿನಲ್ಲಿ ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಶಿಬಿರ ನಡೆಯಲಿದೆ. ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಮೈಗ್ರೇನ್, ತಲೆನೋವು, ಅಲರ್ಜಿ, ಅಸ್ತಮಾ, ಸಂಧಿವಾತ ಮೊದಲಾದ ರೋಗಗಳಿಗೆ ಸರಳ, ನಿಬಂಧನಾರಹಿತ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು. ಡಾ. ಸತ್ಯನಾರಾಯಣ ಶಿಬಿರ ನಡೆಸಿಕೊಡುವರು. ಹೆಚ್ಚಿನ ಮಾಹಿತಿಗಾಗಿ 9901829233 ಸಂಪರ್ಕಿಸಬಹುದು.

ಅರ್ಜಿ ಆಹ್ವಾನ
ಮಂಗಳೂರು: ವಾರ್ತಾ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯಿಂದ ಬೀದಿ ನಾಟಕ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 5 ಮಂದಿ ಕಲಾ ತಂಡಗಳ ಆಯ್ಕೆ ಮಾಡಲಾಗುವುದು. ಪ್ರತಿ ತಂಡದಲ್ಲಿ ಕನಿಷ್ಟ 10 ಕಲಾವಿದರು ಹಾಗೂ ಇಬ್ಬರು ಮಹಿಳಾ ಕಲಾವಿದರು ಇರಬೇಕು. ಬೀದಿನಾಟಕ, ಯಕ್ಷಗಾನ, ತೊಗಲು ಬೊಂಬೆಯಾಟ, ಮ್ಯಾಜಿಕ್ ಶೋ ಮುಂತಾದ ಪ್ರಚಲಿತ ಕಲಾಪ್ರಕಾರ ಕಲಾತಂಡಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯಲ್ಲಿ ತಂಡದ ಮುಖ್ಯಸ್ಥರು ಸೇರಿದಂತೆ 10 ಕಲಾವಿದರ ಭಾವಚಿತ್ರ ಲಗತ್ತಿಸಬೇಕು. ಒಂದು ತಂಡದ ಸದಸ್ಯರು ಇನ್ನೊಂದು ತಂಡದಲ್ಲಿ ಇರುವುದನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಯಲ್ಲಿ ಸಲ್ಲಿಸಿದ ಕಲಾತಂಡದ ಕಲಾವಿದರನ್ನೇ ಆಯ್ಕೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ತಂಡಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ವಾರ್ತಾ ಇಲಾಖೆ ಕಚೇರಿಯಿಂದ ಅರ್ಜಿ ನಮೂನೆ ಪಡೆಯಬಹುದು. ಜೂ. 14 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ 0824-2424254 ಸಂಪರ್ಕಿಸಬಹುದು.

ಜಾನಕಿ ಬ್ರಹ್ಮಾವರ ಆಯ್ಕೆ
ಮೂಲ್ಕಿ: ಕರಾವಳಿ ಲೇಖಕಿ, ವಾಚಕಿಯರ ಸಂಘದ ಅಧ್ಯಕ್ಷೆಯಾಗಿ ಜಾನಕಿ ಬ್ರಹ್ಮಾವರ ಆಯ್ಕೆಯಾಗಿದ್ದಾರೆ. ಸಾಗಿತ್ಯ ಸದನದಲ್ಲಿ ಡಾ. ಸಬೀಹಾ ಭೂಮಿಗೌಡ ಅಧ್ಯಕ್ಷತೆಯಲ್ಲಿ ಜರಗಿದ ಸಂಸ್ಥೆಯ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಉಪಾಧ್ಯಕ್ಷೆ ಡಾ. ಅನುಸೂಯ ಸಾಲ್ಯಾನ್, ಕಾರ್ಯದರ್ಶಿ ಸುಧಾರಾಣಿ, ಜೊತೆ ಕಾರ್ಯದರ್ಶಿ ಸೌಜನ್ಯ ಮುದ್ರಾಡಿ, ಕೋಶಾಧಿಕಾರಿ ವಿಶಾಲಾಕ್ಷಿ.

ಜೂನ್‌ನಲ್ಲೂ ಎಪಿಎಲ್‌ಗೆ ಪಡಿತರ ಇಲ್ಲ
ಮಂಗಳೂರು: ಜಿಲ್ಲೆಯ ಪಡಿತರ ಚೀಟಿದಾರರಿಗೆ 2013ನೇ ಜೂನ್ ತಿಂಗಳ ಪಡಿತರ ಸಾಮಾಗ್ರಿ ಬಿಡುಗಡೆಗೊಂಡಿದ್ದು, ಜೂ. 25 ರೊಳಗೆ ಪಡೆಯುವಂತೆ ಸೂಚಿಸಲಾಗಿದೆ. ಈ ಬಾರಿಯೂ ಎಪಿಎಲ್ ಪಡಿತರದಾರರಿಗೆ ಅಕ್ಕಿ ಮತ್ತು ಗೋಧಿ ಇಲ್ಲ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಕೆಜಿಗೆ ರು. 3ರಂತೆ 29 ಕೆ.ಜಿ. ಅಕ್ಕಿ, ಕೆ.ಜಿ.ಗೆ 2 ರಂತೆ 6ಕೆ.ಜಿ. ಗೋಧಿ, ಅಕ್ಷಯ ಪಡಿತರ ಚೀಟಿದಾರರಿಗೆ 1 ಯೂನಿಟ್‌ಗೆ 4ಕೆ.ಜಿ. ಅಕ್ಕಿಯಂತೆ ಗರಿಷ್ಟ 15ಕೆ.ಜಿ. ಅಕ್ಕಿ, ಒಬ್ಬ ಸದಸ್ಯನಿಗೆ 1ಕೆ.ಜಿ.ಯಂತೆ 3 ಯೂನಿಟ್‌ಗೆ 2ಕೆ.ಜಿ., ಹೆಚ್ಚಿನ ಯೂನಿಟ್‌ಗೆ ಗರಿಷ್ಟ 3ಕೆ.ಜಿ. ಗೋಧಿ ಕೆ.ಜಿಗೆ ರು. 3ರಂತೆ ನೀಡಲಾಗುತ್ತದೆ. ಸಕ್ಕರೆ ಒಂದೂವರೆ ಕೆ.ಜಿ.ಗೆ ರು. 13.50 ನೀಡಲಾಗುತ್ತದೆ. ಅಡುಗೆ ಅನಿಲ ರಹಿತ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆ, ಅನೌಪಚಾರಿಕ ಪಡಿತರ ಪ್ರದೇಶದಲ್ಲಿ 6 ಲೀ., ಗ್ರಾಮಾಂತರ ಪ್ರದೇಶದಲ್ಲಿ 3 ಲೀ., ಪಟ್ಟಣ ಪ್ರದೇಶದಲ್ಲಿ 5ಲೀ. ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನೌಕರರ ಸಂಘ ಸದಸ್ಯತ್ವಕ್ಕೆ 20 ಗಡುವು
ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ.ಕ.ಜಿಲ್ಲೆಯ ಇದರ 2013-18ನೇ ಸಾಲಿಗೆ ಸಾರ್ವತ್ರಿಕ ಚುನಾವಣೆ ಸಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಲಿದ್ದು, ಸಂಘದ ಸದಸ್ಯತ್ವ ನೋಂದಣಿಗೆ ಜೂ.20 ಕೊನೆದಿನವಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಾರ್ಜ್ ಪಿಂಟೋ, ಸಂಘದ ಪ್ರಸ್ತುತ ಆಡಳಿತ ಮಂಡಳಿ ಅವಧಿ ಫೆ.13ಕ್ಕೆ ಅಂತ್ಯಗೊಂಡಿದೆ. ಸಂಘದ ಮನವಿ ಮೇರೆಗೆ ಚುನಾವಣೆ ನಡೆಸಲು ಜೂ.30ರವರೆಗೆ ಕಾಲಾವಕಾಶ ನೀಡಿದೆ. ಸರ್ಕಾರದ ಉಪ ಕಾರ್ಯದರ್ಶಿ ಸಿದ್ಧಗಂಗಯ್ಯ ಚುನಾವಣಾಧಿಕಾರಿಯಾಗಿದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣ ಮತ್ತು ಬೈಲಾ ಪ್ರಕಾರ ಜು.13ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿ ಸೆ.13ಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಅದಕ್ಕೂ ಮೊದಲು ಸಂಘದ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಗುವುದು ಎಂದರು.  ಚುನಾವಣಾ ಅಧಿಸೂಚನೆ, ಚುನಾವಣಾ ವೇಳಾಪಟ್ಟಿ, ಚುನಾವಣಾ ರೂಪುರೇಷೆಗಳ ಸುತ್ತೋಲೆಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 25 ಸಾವಿರ, ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದಾರೆ ಎಂದರು.

16ರಂದು ಪ್ರತಿಭಾ ಪುರಸ್ಕಾರ
ಮೂಲ್ಕಿ: ಮೂಲ್ಕಿಯ ಯುವವಾಹಿನಿ ಘಟಕದ ದಶಮಾನೋತ್ಸವದ ಸಮಾರೋಪ, 2013-14ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜೂನ್ 16ರ ಸಂಜೆ ಮೂಲ್ಕಿಯ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ವಹಿಸಲಿದ್ದು ದಶಸಂಭ್ರಮ ಸಾಧನ ಪತ್ರಿಕೆಯನ್ನು ಉದ್ಯಮಿ ಚಂದ್ರಶೇಖರ ನಾನಿಲ್ ಬಿಡುಗಡೆಗೊಳಿಸಲಿದ್ದಾರೆ. ಮೂಲ್ಕಿಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯಧೀಶ್ ಅಮೀನ್ ಕೊಕ್ಕರ್ಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement