ಮನಸೂರೆಗೊಳಿಸಿದ 'ತುಕ್ರನ ಕನಸು'
ಸುಬ್ರಹ್ಮಣ್ಯ: ಇಲ್ಲಿನ ಕೆ.ಎಸ್.ಎಸ್. ಕಾಲೇಜಿನ ರಂಗ ಘಟಕ 'ಕುಸುಮಾ ಸಾರಂಗ'ದ ವತಿಯಿಂದ ಡಾ. ರಾಮಚಂದ್ರಶೇಖರ ಕಂಬಾರ ರಚಿಸಿದ, ವೈ.ಡಿ. ಬಾದಾಮಿ ನಿರ್ದೇಸಿದ ನಾಟಕ 'ತುಕ್ರನ ಕನಸು' ಸೋಮವಾರ ಸಂಜ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ನಾಟಕ ಪ್ರದರ್ಶನದಲ್ಲಿ ಕಿರಣ್ ಎನ್.ಡಿ., ಪುನೀತ್.ಎನ್, ತುಳಸಿ ಪಿ.ಬಿ., ರಾಧಿಕಾ ಬಿ.ಎ., ಗಾಯತ್ರಿ ಜೆ.,ಪ್ರಜ್ವಲ್ ಪಿ.ಎಸ್., ಸವಿತಾ .ಕೆ, ಜಲಾಕ್ಷಿ ಎನ್.ವಿ., ಪುನೀತ್ ಎಸ್., ಪ್ರೀತಂ ಎಂ.ಪಿ., ಶರಣ್ಯ ಕುಮಾರ ಎಂ., ಜಯ ವಿನೋದ .ಕೆ, ಶರತ್ ಕುಮಾರ್, ಹರ್ಷಿತಾ .ಎಚ್, ಸಂತೋಷ್ .ಬಿ, ಉದಯ .ಕೆ, ತೇಜಕುಮಾರ, ಶುಭಲಕ್ಷ್ಮಿ ಪಾಲ್ಗೊಂಡಿದ್ದರು. ಸಂಗೀತ ಮತ್ತು ಹಿನ್ನೆಲೆಯಲ್ಲಿ ಸುರೇಶ್ ಕೇಸಾಪುರ, ತಬಲದಲ್ಲಿ ಗಣೇಶ್ ಪಂಜ, ವಸ್ತ್ರಾಲಂಕಾರ, ಪ್ರಸಾಧನ ಶಿವರಾಮ್ ಕಲ್ಮಡ್ಕ, ಧ್ವನಿ ಬೆಳಕಿನಲ್ಲಿ ತುಕರಾಮ್ ಏನೆಕಲ್ ಹಾಗೂ ಪುನೀತ್ ಏನೆಕಲ್ಲು ಸಹಕರಿಸಿದರು.