ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆಎಸ್‌ಎಸ್ ಕಾಲೇಜ್‌ಗೆ ಶೇ. 85 ಪದವಿ ಫಲಿತಾಂಶ

Lingaraj Badiger
Updated On : 14 Jun 2013, 11:52 am

ಸುಬ್ರಹ್ಮಣ್ಯ: ಇಲ್ಲಿನ ಕೆ.ಎಸ್.ಎಸ್. ಕಾಲೇಜಿನ 2013ನೇ ಸಾಲಿನ ಅಂತಿಮ ಪದವಿ ಫಲಿತಾಂಶ ಪ್ರಕಟಗೊಂಡಿದ್ದು ಶೇ. 85 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 204 ವಿದ್ಯಾರ್ಥಿಗಳಲ್ಲಿ 174 ಮಂದಿ ಉತ್ತೀರ್ಣಗೊಂಡಿರುತ್ತಾರೆ. ಬಿ.ಎ.ನಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 77 ಮಂದಿ ತೇರ್ಗಡೆ ಹೊಂದಿ ಶೇ.94 ಫಲಿತಾಂಶ ಬಂದಿದೆ. ಬಿ.ಕಾಂ ನಲ್ಲಿ 66 ವಿದ್ಯಾರ್ಥಿಗಳ ಪೈಕಿ 57 ಮಂದಿ ತೇರ್ಗಡೆ ಹೊಂದಿ ಶೇ. 86.4 ಫಲಿತಾಂಶ ಬಂದಿದೆ. ಬಿ.ಬಿ.ಎಂ.ನಲ್ಲಿ 56 ವಿದ್ಯಾರ್ಥಿಗಲು ಪರೀಕ್ಷೆಗೆ ಹಾಜರಾಗಿದ್ದು, 40 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ.71.4 ಫಲಿತಾಂಶ ಬಂದಿದೆ. ಬಿ.ಎ.ನಲ್ಲಿ ಲಾವಣ್ಯ ಎಂ. ಅತ್ಯಧಿಕ ಶೇ. 81.36 ಬಿ.ಕಾಂನಲ್ಲಿ ವರ್ಷಾ ಎ.ಜೆ. ಶೇ. 90.80 ಮತ್ತು ಬಿ.ಬಿ.ಎಂನಲ್ಲಿ ಸುಮಾ ಕೆ.ಬಿ. ಶೇ. 81.80 ಅಂಕ ಪಡೆದು ಆಯಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕೈಂಗಾಜೆ ರಾಮಕೃಷ್ಣ ಗೌಡರಿಗೆ ಶ್ರದ್ಧಾಂಜಲಿ
ಸುಳ್ಯ: ಸುಳ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ಸಿಗರಾದ ಕೈಂಗಾಜೆ ರಾಮಕೃಷ್ಣ ಗೌಡರಿಗೆ ಶ್ರದ್ಧಾಂಜಲಿ ಸಭೆಯು ಇತ್ತೀಚೆಗೆ ಸುಳ್ಯದ ಕೆ.ವಿ.ಜಿ. ಸಮುದಾಯ ಭವನ ಅಮರಶ್ರೀಯಲ್ಲಿ ನಡೆಯಿತು. ರಾಜ್ಯ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಗಂಗಾಧರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಬಿ. ದಿವಾಕರ ರೈ, ದ.ಕ. ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಾ ಕೋಲ್ಚಾರು ಮಾತನಾಡಿದರು. ವೀರಮ್ಮ ಕೊಂಗಾಜೆ, ಕೊಂಗಾಜೆ ಮನೆತನದ ಹಿರಿಯರಾದ ಉತ್ತಪ್ಪ ಗೌಡ ಕೊಂಗಾಜೆ, ಸಹೋದರ, ನ್ಯಾಯವಾದಿ ವೆಂಕಟ್ರಮಣ ಕೊಂಗಾಜೆ ಇದ್ದರು.ಜಯರಾಮ ದೇರಪ್ಪಜ್ಜನಮನೆ ಸ್ವಾಗತಿಸಿ, ವಂದಿಸಿದರು.
ಮಂಗಳೂರು ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ಮಂಜೂರಾತಿಗೆ ಆಗ್ರಹ
ಪುತ್ತೂರು: ಮಂಗಳೂರು ಕೇಂದ್ರ ರೈಲು ನಿಲ್ದಾಣದ ಅಭಿವೃದ್ಧಿಗೆ ಅವಶ್ಯಕವಾದ ರು. 16 ಕೋಟಿ ಕಾಮಗಾರಿಗೆ ರೇಲ್ವೆ ಸಚಿವಾಲಯದ ಮಂಜೂರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಮಂಗಳೂರು ಶಾಸಕ ಜೆ.ಆರ್. ಲೋಬೋಗೆ ಪುತ್ತೂರಿನ ರೈಲು ನಿಲ್ದಾಣದ ಬಳಿ ನಿವಾಸಿ ವಿಲಿಯಂ ಪಿಂಟೋ ಮನವಿ ಸಲ್ಲಿಸಿದ್ದಾರೆ. ಪ್ಲಾಟ್‌ಫಾರಂ ಕೊರತೆಯಿಂದ ರಾಜ್ಯದ ಕರಾವಳಿಗೆ ಅನುಕೂಲವಾಗುವ ಪ್ರಮುಖ ರೈಲುಗಳು ಮಂಗಳೂರು ಕೇಂದ್ರ ನಿಲ್ದಾಣಕ್ಕೆ ಆಗಮಿಸದೆ ಕಂಕನಾಡಿ ಜಂಕ್ಷನ್‌ನಲ್ಲಿ ನಿಲುಗಡೆಗೊಳ್ಳುತ್ತಿವೆ. ಇದರಿಂದ ನಗರದ ಯಾತ್ರಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ದಕ್ಷಿಣ ರೇಲ್ವೆ ಕಳೆದ 2 ಬಜೆಟ್ ಸಮಯದಲ್ಲಿ ಕೇಂದ್ರ ನಿಲ್ದಾಣದಲ್ಲಿ 4ನೇ ಮತ್ತು 5ನೇ ಪ್ಲಾಟ್‌ಫಾರಂ, ಅತ್ತಾವರ ಕಡೆಯಿಂದ 2 ನೇ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯ ಕಾಮಗಾರಿಗಾಗಿ ರು. 16 ಕೋಟಿಯ ಪ್ರಸ್ತಾವನೆ ಸಲ್ಲಿಸಿದೆ. ಆದರೆ 2 ವರ್ಷದ ಬಜೆಟ್‌ನಲ್ಲಿಯೂ ಈ ಪ್ರಸ್ತಾವನೆ ಸೇರ್ಪಡೆಗೊಳ್ಳದ ಕಾರಣ ರಾಜ್ಯಕ್ಕೆ ಹಾಗೂ ವಿಶೇಷವಾಗಿ ಕರಾವಳಿಗೆ ಅನ್ಯಾಯವಾಗಿರುತ್ತದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಸಂಸದ, ಶಾಸಕರು ಈ ಬಗ್ಗೆ ಪರಿಶೀಲನೆ ನಡೆಸಿ ಕೇಂದ್ರ ರೇಲ್ವೆ ಸಚಿವಾಲಯದ ಮಂಗಳೂರು ಪ್ರದೇಶದ ಆದಾಯ, ಒತ್ತಡ ಪರಿಗಣಿಸಿ ಕಾಮಗಾರಿ ಪ್ರಸ್ತಾವನೆಗೆ ಮಂಜೂರಾತಿ ಹಾಗೂ ಹಣಕಾಸು ಬಿಡುಗಡೆಯ ಸಮಂಜಸ ಕ್ರಮಕ್ಕಾಗಿ ಶಿಫಾರಸು ಮಾಡುವಂತೆ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement