ರೇಲ್ವೆ ಸುರಕ್ಷಿತ ಚಾಲನೆಗೆ ಸೂಚನೆ
ಮಂಗಳೂರು: ರೈಲಿನ ತುರ್ತು ನಿರ್ಗಮನ ಕಿಟಿಕಿಯಿಂದ ಪ್ರಯಾಣಿಕರು ಬಿದ್ದ ಘಟನೆಗಳು ವರದಿಯಾಗುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಜೂ. 20ರ ತನಕ ರೇಲ್ವೆ ಲೋಕೋ ಪೈಲೆಟ್ಗಳಿಗೆ ಸುರಕ್ಷಿತ ಚಾಲನೆ ನಡೆಸುವಂತೆ ಪಾಲ್ಘಾಟ್ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಪಿಯೂಷ್ ಅಗರ್ವಾಲ್ ಆದೇಶಿಸಿದ್ದಾರೆ. ರೈಲಿನ ಟಿಕೆಟ್ ತಪಾಸಣೆ ಅಧಿಕಾರಿ ಮತ್ತು ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರು ತುರ್ತು ನಿರ್ಗಮನ ಕಿಟಕಿಯನ್ನು ಭದ್ರ ಪಡಿಸಿರುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಎಂ. ರಾಘವನ್ ಆಯ್ಕೆ
ಮಂಗಳೂರು: ಆ್ಯಕ್ಷನ್ ಗ್ರೂಫ್ ಫಾರ್ ಯೆಲ್ಡರ್ಲಿ(ಎಜಿಇ) ಸಂಘದ ಅಧ್ಯಕ್ಷರಾಗಿ ಎಂ. ರಾಘವನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಹೋದಯ ಸಭಾಂಗಣದಲ್ಲಿ ನಡೆದ ಸಮಿತಿಯ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರನ್ನು ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷ- ಲಕ್ಷ್ಮಿ ರಾವ್ ಆರೂರ್, ಕಾರ್ಯದರ್ಶಿ- ಲಾವ್ರಾ ಡಿಸೋಜ, ಜೊತೆ ಕಾರ್ಯದರ್ಶಿ- ಕೆ. ಮಂಜುನಾಥ್, ಖಜಾಂಚಿ- ಎಂ.ಎಸ್. ಕಾಮತ್, ಸದಸ್ಯರಾಗಿ ಐರಿನ್ ಪೈಸ್, ಜುಡಿತ್ ಮಸ್ಕರೇನಸ್, ಸುಮತಿ, ಎಂ. ಸುಧಾಕರ್, ಝೈದ್ ಹುಸೇನ್ ಬಾಜಿ ನೇಮಕಗೊಂಡಿದ್ದಾರೆ.
ಕರಾವಳಿ ಕಾಲೇಜಿಗೆ ಶೇ.ನೂರು
ಮಂಗಳೂರು: ಮಂಗಳೂರು ನೀರುಮಾರ್ಗದಲ್ಲಿರುವ ಕರಾವಳಿ ಕಾಲೇಜು ಆಫ್ ಹೊಟೇಲ್ ಮೆನೇಜ್ಮೆಂಟ್ಗ (ಬಿಎಚ್ಎಸ್)ಏಪ್ರಿಲ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಅಂತಿಮ(6ನೇ ಸೆಮಿಸ್ಟರ್)ಪದವಿ ಪರೀಕ್ಷೆಯಲ್ಲಿ ಶೇ.ನೂರು ಫಲಿತಾಂಶ ಪಡೆದಿದೆ. ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶೇ.ನೂರು ಉದ್ಯೋಗಾವಕಾಶ ದಾಖಲೆಯೊಂದಿಗೆ ದೇಶ, ವಿದೇಶದಲ್ಲಿ ಹೊಟೇಲ್ ಉದ್ಯಮ ಸೇರಿದಂತೆ ವಿವಿಧ ಉದ್ಯೋಗದಲ್ಲಿದ್ದಾರೆ. ದಾಖಲೆ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಜಿ.ಆರ್.ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಸ್.ಗಣೇಶ್ ರಾವ್ ಅಭಿನಂದಿಸಿದ್ದಾರೆ.