ಸಮಾಜಮುಖಿ ಸಾಧನೆಗೆ ವಿರೋಧ ಕಂಡುಬಂದರೆ ಸವಾಲಾಗಿ ಸ್ವೀಕರಿಸಿ: ಅಂಗಾರ
ಸುಳ್ಯ:ನಮ್ಮಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ, ಅದು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಾಜ ಮುಖಿ ಸಾಧನೆಗಳಿಗೆ ವಿರೋಧ- ಅಡ್ಡಿಗಳು ಕಂಡು ಬಂದರೆ, ಅದನ್ನು ಸವಾಲಾಗಿ ಸ್ವೀಕರಿಸಿಬೇಕು. ಸಮಾಜದ ಭವಿಷ್ಯದ ದಿನಗಳಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಎಲ್ಲರು ಚಿಂತಿಸಿಬೇಕು ಎಂದು ಶಾಸಕ ಎಸ್. ಅಂಗಾರ ಹೇಳಿದರು.
ಅವರು ಇತ್ತೀಚೆಗೆ ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲ ಮತ್ತು ಅಕ್ಷತಾ ಯುವತಿ ಮಂಡಲಗಳ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಯುವಕ ಮಂಡಲ ಅಧ್ಯಕ್ಷ ಅಶ್ವಿನ್ ಪಾಬ್ಲುಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪಿ. ರಾಧಾಕೃಷ್ಣ ರಾವ್, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಭಟ್, ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಪಂಬೆತ್ತಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ ಇದ್ದರು.
ಯು.ಸಂ. ಮಂಡಳಿ ನಿರ್ದೇಶಕ ದಿಲೀಪ್ ಬಾಬ್ಲುಬೆಟ್ಟು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಯುವತಿ ಮಂಡಲ ಅಧ್ಯಕ್ಷೆ ಕವಿತಾ ಶೆಟ್ಟಿಗದ್ದೆ, ಕಾರ್ಯದರ್ಶಿ ರಚನಾ, ಯುವಕ ಮಂಡಲ ಕಾರ್ಯದರ್ಶಿ ಉಮೇಶ್ ಡಬ್ಬಲ್ ಕಟ್ಟೆ ಇದ್ದರು.
ಇದೇ ಸಂದರ್ಭ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಸುಳ್ಯ ಯು.ಸಂ. ಮಂಡಳಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೇಯಾ ಜಾಕೆ ಪ್ರಾರ್ಥಿಸಿದರು. ತೀಥಾನಂದ ಕೊಡೆಂಕಿರಿ ನಿರೂಪಿಸಿದರು. ಉಮೇಶ್ ಪಂಜದ ಬೈಲು ಸ್ವಾಗತಿಸಿದರು. ಚಿದಾನಂದ ಪಂಜದಬೈಲು ಸನ್ಮಾನಿತರನ್ನು ಪರಿಚಯಿಸಿದರು.