ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂಗಡಿಗಳಿಂದ ನಗದು ಕಳವು

Lingaraj Badiger
Updated On : 15 Jun 2013, 12:09 pm

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ಎಂಬಲ್ಲಿ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ಹಾಗೂ ಮೊಬೈಲ್ ಕರೆನ್ಸಿ ಕದ್ದೊಯ್ದ ಘಟನೆ ಸಂಭವಿಸಿದೆ.  ಕರಾಯ ಪೇಟೆಯಲ್ಲಿನ ಮುತ್ತಪ್ಪ ಎಂಬವರ ಅಂಗಡಿಗೆ ಹೆಂಚು ತೆಗೆದು ಒಳ ನುಗ್ಗಲು ಯತ್ನಿಸಿರುವ ಕಳ್ಳರು ಅದು ವಿಫಲವಾದಾಗ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಸುಮಾರು 2 ಸಾವಿರ ನಗದು, 3 ಸಾವಿರ ಮೌಲ್ಯದ ಮೊಬೈಲ್ ಕರೆನ್ಸಿ ಕದ್ದೊಯ್ದಿದ್ದಾರೆ.  ಪಕ್ಕದ ಅಬ್ಬಾಸ್ ಎಂಬವರ ಅಂಗಡಿಗೂ ಕನ್ನ ಹಾಕಿರುವ ಕಳ್ಳರು 1 ಸಾವಿರದಷ್ಟು ಚಿಲ್ಲರೆ ಹಣ, ಬೀಡಿ, ಸಿಗರೇಟ್ ಕಳವು ಮಾಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement