ಮಹಿಳೆಗೆ ಯಶಸ್ವಿ ಕೀ ಹೋಲ್ ಸರ್ಜರಿ
ಮಂಗಳೂರು: ಲಿವರ್ ಕ್ಯಾನ್ಸರ್ ತೊಂದರೆ ಕೀ ಹೋಲ್ ಸರ್ಜರಿ ಮೂಲಕ ಮಂಗಳೂರಿನ ಯುನಿಟಿ ಆಸ್ಪತ್ರೆ ಯಶಸ್ವಿಯಾಗಿ ಗುಣಪಡಿಸಿದೆ. ಶುಕ್ರವಾರ ಈ ವಿಷಯ ತಿಳಿಸಿದ ಆಸ್ಪತ್ರೆ ನಿರ್ವಾಹಕ ನಿರ್ದೇಶಕ ಅಜ್ಮಲ್ ಎಂ.ಹಬೀಬ್, 72 ವರ್ಷದ ಮಹಿಳೆ 90 ಕೆ.ಜಿ. ಇದ್ದು, ಈಕೆ ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದಳು. ಕ್ಯಾನ್ಸರ್ನಿಂದಲೇ ದೇಹದ ತೂಕ ಹೆಚ್ಚಾಗಿ ಶಸ್ತ್ರಚಿಕಿತ್ಸೆ ಮಾಡುವುದೂ ಸುಲಭವಿರಲಿಲ್ಲ. ಆದರೆ ಕಿ ಹೋಲ್ ಸರ್ಜರಿ ಮೂಲಕ ಗುಣಪಡಿಸುವ ಸವಾಲನ್ನು ಆಸ್ಪತ್ರೆ ವೈದ್ಯರು ತೆಗೆದುಕೊಂಡರು. ಸರ್ಜನ್ ಡಾ.ಜಲಾಲುದ್ದೀನ್ ಅಕ್ಬರ್ ನೇತೃತ್ವದಲ್ಲಿ ಆಕೆಯ ತಪಾಸಣೆ ನಡೆಸಿದ ವೈದ್ಯರು ಕೀ ಹೋಲ್ ಸರ್ಜರಿ ನಡೆಸುವಲ್ಲಿ ಸಫಲರಾದರು. ಈಗ ಅಜ್ಮಲ್ ಗುಣಮುಖವಾಗಿದ್ದಾರೆ ಎಂದು ಹೇಳಿದರು.