ಸಂಪಾಜೆ: ಡೆಂಘೀ ಭೀತಿ- ಅಂಗಡಿ, ಹೊಟೇಲ್ಗಳ ಪರಿಶೀಲನೆ
ಸುಳ್ಯ: ತಾಲೂಕಿನ ಹಲವಡೆ ಕಾಣಿಸಿಕೊಂಡ ಡೆಂಘೀ ಜ್ವರ ಸಂಪಾಜೆ ಪರಿಸರದಲ್ಲೂ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಸಂಪಾಜೆ ಗ್ರಾಮ ಪಂಚಾಯಿತಿ ಜಂಟಿಯಾಗಿ ಕಲ್ಲುಗುಂಡಿ ಪೇಟೆಯಲ್ಲಿರುವ ಹೊಟೇಲ್, ಚಿಕನ್ ಸೆಂಟರ್ಗಳಿಗೆ ಭೇಟಿ ನೀಡಿ ಅಲ್ಲಿನ ಶುಚಿತ್ವ ಪರಿಶೀಲನೆ ನಡೆಸಿತು.
ಹೊಟೇಲ್ಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಪಯಸ್ವಿನಿ ಹೊಳೆಗೆ ಬಿಡುತ್ತಿರುವುದು ಅಧಿಕೃತರ ಗಮನಕ್ಕೆ ಬಂದುದರಿಂದ ಹೊಟೇಲ್ ಮಾಲೀಕರಿಗೆ ಎಚ್ಚರಿಕೆ ನೀಡಿ ಇನ್ನು ಮೂರು ದಿನದ ಒಳಗಾಗಿ ಇಂಗು ಗುಂಡಿ ನಿರ್ಮಿಸಿ ಅದಕ್ಕೆ ನೀರು ಬಿಡುವ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಲಾಯಿತು.
ತಪ್ಪಿದ್ದಲ್ಲಿ ಹೊಟೇಲ್ಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್, ಸದಸ್ಯರಾದ ಜಗದೀಶ್ ಕೆ.ಪಿ., ಜಿ. ರಾಮಚಂದ್ರ, ಅರಂತೋಡು ಆರೋಗ್ಯಾಧಿಕಾರಿ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.