ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಪಘಾತ: ಗಾಯಾಳು ಸಾವು

Lingaraj Badiger
Updated On : 17 Jun 2013, 12:21 pm

ಸುಳ್ಯ: ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪಂಜದ ಪ್ರಾಥಮಿಕ ಶಾಲೆಯ ಎದುರು ಮುಖ್ಯ ರಸ್ತೆಯಲ್ಲಿ ಮೇ 3ರಂದು ಮುಂಜಾನೆ ಚಂದ್ರಶೇಖರ ಕುಕ್ಕುಪುಣಿಯವರ ಬೈಕ್ ಮತ್ತು ಐವತ್ತೊಕ್ಲು ಗ್ರಾಮದ ಅಡ್ಕ ಜಯಂತ ಎಂಬವರ ಬೈಕ್ ಡಿಕ್ಕಿ ಹೊಡೆದಿತ್ತು. ತಲೆಗೆ ತೀವ್ರ ಗಾಯಗೊಂಡ ಜಯಂತ(39) ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.
ಕುಸಿದು ಬಿದ್ದು ಸಾವು
ಸುಳ್ಯ: ಅಮರಪಡ್ನೂರು ಗ್ರಾಮದ ಕೋಟೆ ಬನ ತಿಮ್ಮಪ್ಪ ಗೌಡ ಎಂಬವರು ಶೇಣಿ- ಕಜೆಮೂಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement