ನಕಲಿ ಬೀಡಿ ತಯಾರಿ ಮೂವರ ಬಂಧನ
ಮಂಗಳೂರಿನ ಹೆಸರಾಂತ ಪ್ರೀತಿ ಬೀಡಿಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿಯ ಅಲ್ಲಾ ಭಕ್ಷ (27), ಕಮಲಾನಗರದ ಜೆ. ಈಶ್ವರರಾವ್(37) ಹಾಗೂ ಬಿಸ್ಮಿಲ್ಲಾ ನಗರದ ಮುನೀರ್ ಅಹಮದ್(56) ಬಂಧಿತರು. ಶಿರಾ ತಾಲೂಕಿನ ಸೈಯದ್ ಬಾಷಾ ಹಾಗೂ ಕಮಲಾನಗರದ ನರಸಿಂಗ ರಾವ್ ಪರಾರಿಯಾಗಿದ್ದಾರೆ. ಆರೋಪಿಗಳಿಂದ 8 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬೀಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸುಮಾರು ಒಂದೂವರೆ ವರ್ಷದಿಂದ ನಕಲಿ ಬೀಡಿಗಳನ್ನ ತಾವೇ ತಯಾರಿಸಿ, ನಕಲಿ ಲೇಬಲ್, ರ್ಯಾಪರ್‌ಗಳನ್ನು ಹಾಕಿ ಬೀಡಿ ಮಾರಾಟ ಮಾಡುತ್ತಿದ್ದರು. ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಈ ನಕಲಿ ಬೀಡಿಗಳನ್ನು ಮಾರಾಟ ಮಾಡುತ್ತಿದ್ದರು. ನಾಪತ್ತೆಯಾಗಿರುವವರು ಪ್ರಕರಣದ ಪ್ರಮುಖ ಆರೋಪಿಗಳು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.