ವಿದ್ಯುತ್ ತಂತಿ ಸ್ಪರ್ಶ: ಐದು ಜಾನುವಾರು ಸಾವು
ಬಂಟ್ವಾಳ: ವಿದ್ಯುತ್ ತಂತಿ ಸ್ಪರ್ಶಿಸಿ ಐದು ಜಾನುವಾರುಗಳು ಮೃತಪಟ್ಟ ಘಟನೆ ತಾಲೂಕಿನ ಬಸ್ತಿಪಡ್ಪು ಬಳಿಯ ಎರ್ಮಳ ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಚಿಕ್ಕಯಮಠ ನಿವಾಸಿ ಸೆಲ್ಲಿ t’ ಸೋಜ ಹಾಗೂ ಪೆಲತ್ತಿಮಾರ್ ನಿವಾಸಿ ಗಣೇಶ್ ಎಂಬವರಿಗೆ ಸೇರಿದ ತಲಾ ಎರಡು ದನಗಳು ಹಾಗೂ ಫೆಡ್ರಿಕ್ t’ ಸೋಜಾ ಎಂಬವರಿಗೆ ಸೇರಿದ ಒಂದು ಹಸು ಮೃತಪಟ್ಟಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮನೆಯ ಕೂಗಳತೆಯ ದೂರದಲ್ಲಿಯೇ ಈ ಗದ್ದೆ ಪ್ರದೇಶವಿದ್ದು, ಜಾನುವಾರುಗಳು ಇಲ್ಲಿಗೆ ಬಂದು ಹುಲ್ಲು ಮೇಯುತ್ತಿರುತ್ತವೆ. ಭಾನುವಾರ ವಿದ್ಯುತ್ ಪ್ರವಾಹಿಸುತ್ತಿದ್ದ ಹೈಟೆನ್ಷನ್ ವಿದ್ಯುತ್ ತಂತಿಯೊಂದು ಕಡಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.