ಸ್ವಸಹಾಯ ಗುಂಪಿಗೆ ಕಡಿಮೆ ಬಡ್ಡಿ ದರ ಸಾಲ: ಆಸ್ಕರ್
ಮಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಸ್ವಸಹಾಯ ಗುಂಪಿನ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
ಇಲ್ಲಿನ ಲೊಯಲಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಶಾಸಕರು ಹಾಗೂ ಸಚಿವರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿ, ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಕಾಂಗ್ರೆಸ್ ನಡೆದುಕೊಳ್ಳಲಿದೆ. ಶೀಘ್ರವೇ ಇದು ಜಾರಿಯಾಗಲಿದೆ ಎಂದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ರಾಜ್ಯ ಸರ್ಕಾರ 4,200 ಕೋಟಿ ಬಡವರ ಸಾಲ ಮನ್ನಾ ಮಾಡಿದೆ. ಬಡವರಿಗೆ ಕೆ.ಜಿ.ಗೆ 1ರಂತೆ ಅಕ್ಕಿ ನೀಡುವ ಮೂಲಕ 4 ಸಾವಿರ ಕೋಟಿ ಹೊರೆ ಭರಿಸುತ್ತಿದೆ ಎಂದರು.