ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪುತ್ತೂರು: ಭಾರಿ ಮಳೆಗೆ ಹಲವೆಡೆ ಹಾನಿ

Vishwanath S
Updated On : 19 Jun 2013, 12:00 pm

ಪುತ್ತೂರು: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪುತ್ತೂರು ತಾಲೂಕಿನ ಹಲವೆಡೆ ಹಾನಿಯಾಗಿದೆ.
ಕುರಿಯ ಗ್ರಾಮದ ಹೊಸಮಾರು ವಿಷ್ಣು ನಗರ ಎಂಬಲ್ಲಿ ಜಯರಾಮ ಶೆಟ್ಟಿ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದು ಮನೆ ಅಪಾಯದ ಅಂಚಿನಲ್ಲಿದೆ.
ಬಪ್ಪಳಿಗೆ ಬೈಪಾಸ್ ರಸ್ತೆಯಲ್ಲಿ ಚರಂಡಿ ಕಟ್ಟಿಕೊಂಡು ನೀರು ಸರಾಗವಾಗಿ ಹರಿದುವ ಹೋಗದ ಪರಿಣಾಮ ಸ್ಥಳೀಯ ನಿವಾಸಿ ರೋಶನ್ ಡಯಾಸ್ ಎಂಬವರ ತೋಟಕ್ಕೆ ಕೆಸರು ನೀರು ನುಗ್ಗಿ ಹಾನಿಯಾಗಿದೆ.
ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಬಳಿಯಿರುವ ದೂರವಾಣಿ ವಿನಿಮಯ ಕೇಂದ್ರಕ್ಕೆ ಮಳೆ ನೀರು ನುಗ್ಗಿದ್ದು ವಿನಿಮಯ ಕೇಂದ್ರ ಶೆಡ್ ಹಾಗೂ ಶೌಚಾಲಯ ಜಲಾವೃತವಾಗಿತ್ತು. ಕಡಬ ಸಮೀಪದ ಮರ್ದಾಳ ಎಂಬಲ್ಲಿ ತಕ್ವೀಯತುಲ್ ಇಸ್ಲಾಂ ಜಮಾಅತ್ಗೆ ಸೇರಿದ ವಾಣಿಜ್ಯ ಸಂಕೀರ್ಣದ ಛಾವಣಿ ಮೇಲೆ ಮರ ಬಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿದೆ.
ಹಿರೇಬಂಡಾಡಿ ಗ್ರಾಮದ ಸೆಟ್ಲಪಾಲ್ ನಿವಾಸಿ ರಾಜೀವ ಪೂಜಾರಿ ಎಂಬವರ ದನದ ಕೊಟ್ಟಿಗೆ ಕುಸಿದು ಬಿದ್ದು ಸುಮಾರು 40 ಸಾವಿರ ನಷ್ಟ ಸಂಭವಿಸಿದೆ.
ಕೊಟ್ಟಿಗೆಯಲ್ಲಿದ್ದ 3 ದನಗಳು ಮತ್ತು 2 ಎತ್ತುಗಳು ಹಾಗೂ ಜಾನುವಾರುಗಳಿಗೆ ಹುಲ್ಲು ಹಾಕುತ್ತಿದ್ದ ರಾಜೀವ ಪೂಜಾರಿಗೆ ಗಾಯವಾಗಿದೆ.
ಕೈಲ ಜನತಾ ಕಾಲೋನಿ ನಿವಾಸಿ ಪ್ರಕಾಶ್ ಎಂಬವರ ಮನೆಯ ಆವರಣ ಗೋಡೆ ಶೌಚಾಲಯದ ಮೇಲೆ ಕುಸಿದು ಬಿದ್ದಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement