ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಟ್ಲಪಡ್ನೂರು: ಮನೆ ಭಾಗಶಃ ಕುಸಿತ

Vishwanath S
Updated On : 19 Jun 2013, 11:59 am

ವಿಟ್ಲ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಆಸ್ಯಮ್ಮ ಎಂಬವರ ಮನೆ ಹಿಂಬದಿ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ, ಮನೆ ಪೂರ್ತಿ ಕುಸಿಯುವ ಹಂತದಲ್ಲಿದೆ.
ಮನೆ ಹೊಳೆ ಸಮೀಪ ಇರುವುದರಿಂದ ಮನೆ ಗೋಡೆಯ ಕಲ್ಲುಗಳೆಲ್ಲ ನೀರು ಪಾಲಾಗಿವೆ. ಇನ್ನೆರಡು ದಿನಗಳಲ್ಲಿ ಮನೆ ಸಂಪೂರ್ಣವಾಗಿ ನದಿ ಪಾಲಾಗುವ ಭೀತಿಯಿದೆ ಎಂದು ಮನೆಯವರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್ ಹಾಗೂ ಬಂಟ್ವಾಳ ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಮಾಧವ ಮಾವೆ ಭೇಟಿ ನೀಡಿ, ಸದ್ಯಕ್ಕೆ ತಾತ್ಕಾಲಿಕ ಪರಿಹಾರ ಒದಗಿಸಲಾಗುವುದು, ಮುಂದಿನ ದಿನಗಳಲ್ಲಿ ಈ ಮನೆಯವರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕೊಡಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement