ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ಇಂದಿನಿಂದ ಕಾನೂನು ಅರಿವು ನೆರವು ಕಾರ್ಯಕ್ರಮ

Vishwanath S
Updated On : 19 Jun 2013, 11:59 am

ಸುಬ್ರಹ್ಮಣ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಸುಳ್ಯ ಮತ್ತು ಪೋಲೀಸ್ ಇಲಾಖೆ ಸುಳ್ಯ ಆಶ್ರಯದಲ್ಲಿ ಜೂ.19ರಿಂದ 21ರ ತನಕ ಸುಳ್ಯ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾನೂನು- ಅರಿವು ನೆರವು ಕಾರ್ಯಕ್ರಮ ನಡೆಯಲಿದೆ.
ಗ್ರಾಮೀಣ ಪ್ರದೇಶದಲ್ಲಿ ಕಾನೂನಿನ ಬಗ್ಗೆ ಜನತೆಗೆ ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ತಾಲೂಕಿನಾದ್ಯಂತ ನಡೆಯಲಿದೆ. ಸಾಕ್ಷರತಾ ರಥ ಮೂರು ದಿನ ವಿವಿಧೆಡೆ ಸಂಚರಿಸಲಿದೆ.
ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ರಥದ ಉದ್ಘಾಟನೆಯನ್ನು ಬೆಳ್ಳಾರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 19ರಂದು ಬೆಳಗ್ಗೆ ನಡೆಯುವ ಪ್ರಥಮ ಅಧಿವೇಶನನ್ನು ಸಿವಿಲ್ ನ್ಯಾಯಾಧೀಶ ಸಿ.ಕೆ. ಬಸವರಾಜ್ ಉದ್ಘಾಟಿಸಲಿದ್ದಾರೆ.
ಶಾಸಕ ಎಸ್. ಅಂಗಾರ ಗೌರವ ಉಪಸ್ಥಿತರಾಗಿರುತ್ತಾರೆ. ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಳೀನ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ.
ತಹಸೀಲ್ದಾರ್ ವೇಣುಗೋಪಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ವೃತ್ತ ನಿರೀಕ್ಷಕ ಸುದರ್ಶನ್ ಎಚ್.ವಿ., ಬೆಳ್ಳಾರೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ರಾಯ ಗೌಡ, ಹಿರಿಯ ಶಿಕ್ಷಕ ಮಹಾಲಿಂಗ ಭಟ್, ಸರ್ಕಾರಿ ಅಭಿಯೋಜಕ ಎಂ.ಎಸ್. ಆಲಿ, ಹಿರಿಯ ವಕೀಲ ಕೃಷ್ಣಮೂರ್ತಿ. ಕೆ, ಬಿ. ವೆಂಕಪ್ಪ ಗೌಡ, ಎಂ. ವೆಂಕಪ್ಪ ಗೌಡ, ಗಣಪತಿ ಭಟ್ ನೀರ್ಕಜೆ ಹಾಗೂ ವಕೀಲರಾದ ಪ್ರಶಾಂತ್ ಐ., ಚಂಚಲಾಕ್ಷಿ, ಜ್ಯೋತಿ ಮುಖ್ಯ ಅತಿಥಿಗಳಾಗಿದ್ದಾರೆ.
ಸಮಾರಂಭದ ಬಳಿಕ ಮೋಟಾರು ವಾಹನ ಕಾಯ್ದೆ ಮತ್ತು ವಿಮಾ ಪರಿಹಾರ ಎಂಬ ವಿಷಯವಾಗಿ ಹಿರಿಯ ನ್ಯಾಯವಾದಿ ಸುಧಾಕರ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮಹಿಳಾ ಕೌಟುಂಬಿಕ ದೌರ್ಜನ್ಯ ಎಂಬ ವಿಷಯವಾಗಿ ನ್ಯಾಯವಾದಿ ಸುಮಾ ಬಾಲಚಂದ್ರ ಉಪನ್ಯಾಸ ನೀಡಲಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement