ಅನಾರೋಗ್ಯ: ವೃದ್ಧ ದಂಪತಿ ನೇಣಿಗೆ ಶರಣು
ಮಂಗಳೂರು: ವೃದ್ಧಾಪ್ಯ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಉರ್ವ ಹೊಯ್ಗೆಬೈಲ್‌ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪದ್ಮನಾಭ (74), ಯಮುನಾ (60) ಮೃತಪಟ್ಟವರು. ಮಂಗಳವಾರ ರಾತ್ರಿ ಬುಧವಾರ ಬೆಳಗ್ಗಿನ ಜಾವ ಮಧ್ಯೆ ಮನೆ ಪಕ್ಕಾಸಿಗೆ ನೇಣುಬಿಗಿದುಕೊಂಡು ಸಾವಿಗೆ ಶರಣಾದರು. ಎರಡು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೀಡಾದ ಯಮುನಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಹಣದ ಮುಗ್ಗಟ್ಟು ಎದುರಾಗಿತ್ತು. ಇಬ್ಬರು ಒಂದೇ ಕೋಣೆಯಲ್ಲಿ 4 ಅಡಿ ದೂರದಲ್ಲಿ ಪಕ್ಕಾಸಿಗೆ ನೇಣು ಬಿಗಿದಿದ್ದರು.
ದಂಪತಿಗೆ ಐವರು ಹೆಣ್ಣು ಮಕ್ಕಳು. ಎರಡನೇ ಮಗಳು ತನ್ನ ಮನೆ ಪಕ್ಕದಲ್ಲಿ ತಂದೆ, ತಾಯಿಯರಿಗೆ ಮನೆ ನಿರ್ಮಿಸಿಕೊಟ್ಟಿದ್ದರು. ಪತ್ನಿ ಅನಾರೋಗ್ಯ ಸರಿಪಡಿಸಲಾಗದ ಕೊರಗು ಪದ್ಮನಾಭ ಅವರಲ್ಲಿತ್ತು. ಅಳಿಯ ದಿಲೀಪ್ ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
--