ನಕ್ಸಲ್ ದಮನಕ್ಕೆ ಕಾಯಂ ವ್ಯವಸ್ಥೆ
ಮಂಗಳೂರು: ನಕ್ಸಲ್ ನಿಗ್ರಹಕ್ಕೆ ತಾತ್ಕಾಲಿಕ ಕ್ರವಾಗಿ ಎಎನ್‌ಎಫ್ ಬಳಿಸಿಕೊಳ್ಳಲಾಗುತ್ತಿದೆ. ಇದನ್ನು ಕಾಯಂ ಗೊಳಿಸಲು, ವಿಶೇಷ ಪರಿಣತಿ ಪಡೆದೆ ಉಗ್ರ ನಿಗ್ರಹ ದಳ ರಚಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಕ್ಸಲ್ ನಿಗ್ರಹ ದಳದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ರೋಟೇಶನ್ ಪದ್ಧತಿಯಂತೆ ಕೆಎಸ್‌ಆರ್‌ಪಿ ತುಕಡಿ ಪೊಲೀಸರು ಬಂದು ಹೋಗುತ್ತಾರೆ. ಆದರೆ ಎಟಿಎಸ್‌ನಲ್ಲಿ ದಟ್ಟ ಕಾಡಿನೊಳಗೆ ಯುದ್ಧ ಮಾಡುವ ತರಬೇತಿ ನೀಡಿರುತ್ತಾರೆ. ಉಗ್ರ ನಿಗ್ರಹದಲ್ಲಿ ಗುಪ್ತಚರ ವ್ಯವಸ್ಥೆಯೂ ಪ್ರಬಲವಾಗಿರುತ್ತದೆ. ನಕ್ಸಲ್ ಕಾರ್ಯಾಚರಣೆಗೆ ಎಷ್ಟು ಸಿಬ್ಬಂದಿ ಬೇಕಾದರೂ ನೀಡುತ್ತೇವೆ. ಆದರೆ 500 ಮಂದಿ ಪೊಲೀಸರು ಕಾಡಿಗೆ ನುಗ್ಗಿದರೆ ಅವರು ಬೇರೆ ಜಿಲ್ಲೆಗೆ ಹೋಗಿರುತ್ತಾರೆ. ಇದನ್ನೆಲ್ಲ ತಿಳಿದು ಜಾಣ್ಮೆಯಿಂದ ಕಾರ್ಯ ನಿರ್ವಹಿಸಲು ಎಟಿಎಸ್‌ನಿಂದ ಸಾಧ್ಯ.
ನಕ್ಸಲರ ಬಲ ಕಡಿಮೆಯಾಗುತ್ತಿದೆ. ಅವರ ಚುನಾವಣೆ ಬಹಿಷ್ಕಾರ ನೀಡಿದರೂ ಎಲ್ಲೆಡೆ ಅತಿ ಹೆಚ್ಚು ಮತನದಾನವಾಗಿದೆ. ಹೀಗಾಗಿ ಅವರಿಗೆ ಮುಖ್ಯವಾಹಿನಿಗೆ ಬರುವಂತೆ ಬರುವಂತೆ ಕೇಳುತ್ತಿದ್ದೇವೆ. ಪ್ರಜಾಪ್ರಭುತ್ವ ನೆಲೆಯಲ್ಲಿ ನಕ್ಸಲರ ಜತೆ ಮಾತುಕತೆಗೆ ಕರೆದಿದ್ದೇವೆ. ಶರಣಾಗತಿ ಪ್ಯಾಕೇಜ್, ನೀತಿ ರಿವೈಸ್ ಮಾಡಿದ್ದೇವೆ. ಬುಡಕಟ್ಟು ಜನಾಂಗದ ಯುವಕರಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರ್ಪಡಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ನಾವು ಅವರ ವಿರುದ್ಧ ಯುದ್ಧ ಮಾಡುತ್ತಿಲ್ಲ. ಆದರೆ ದೇಶದ್ರೋಹಿಗಳೇ ಇರಲಿ, ಸಮಾಜಘಾತಕರೇ ಇರಲಿ ಕಾನೂನು ಕೈಗೆ ತೆಗೆದುಕೊಂಡರೆ ನಾವು ಸುಮ್ಮನಿರುವುದಿಲ್ಲ. ಕರ್ನಾಟಕವನ್ನು ನಕ್ಸಲ್ ಪೀಡಿತ ರಾಜ್ಯ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇದರಿಂದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಐಜಿಪಿ ಪ್ರತಾಪ್ ರೆಡ್ಡಿ, ಕಮಿಷನರ್ ಮನೀಶ್ ಕರ್ಬಿಕರ್, ಎಸ್ಪಿ ಅಭಿಷೇಕ್ ಗೋಯಲ್ ಇದ್ದರು.