23ರಿಂದ 2 ದಿನ ಸಚಿವ ಮೊಯ್ಲಿ ಮಂಗಳೂರಲ್ಲಿ
ಮಂಗಳೂರು: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ.ವೀರಪ್ಪ ಮೊಯ್ಲಿ ಜೂ.23 ಮತ್ತು 24ರಂದು ಮಂಗಳೂರಿಗೆ ಭೇಟಿ ನೀಡುವರು. 23ರಂದು ಬೆಳಗ್ಗೆ 9.30ರಿಂದ ಮೂಲ್ಕಿಯಲ್ಲಿ ನಿಯೋಜಿತ ಕಾರ್ಯಕ್ರಮ, 11ಕ್ಕೆ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ ಅವಿಭಜಿತ ದ.ಕ.ಜಿಲ್ಲೆಯ ನೂತನ ಸಚಿವರ ಸನ್ಮಾನ ಕಾರ್ಯಕ್ರಮ. ಮಧ್ಯಾಹ್ನ 1 ಗಂಟೆಗೆ ಮೂಲ್ಕಿಯಲ್ಲಿ ನಿಯೋಜಿತ ಕಾರ್ಯಕ್ರಮ. ಸಂಜೆ 3ಕ್ಕೆ ಮಂಜೇಶ್ವರ ಪ್ರವಾಸಿ ಮಂದಿರ, 3.30ಕ್ಕೆ ಗೆಸ್ಟ್ಹೌಸ್ ಉದ್ಘಾಟನೆ ಮತ್ತು ಗೋವಿಂದ ಪೈ ಸ್ಮಾರಕ ಆಡಿಟೋರಿಯಂ ಶಂಕುಸ್ಥಾಪನೆ, ಗೋವಿಂದ ಪೈ ಟ್ರಸ್ಟ್ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವುದು. 6ಕ್ಕೆ ಮಂಗಳೂರು ವಿವಿ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಅಸೋಸಿಯೇಷನ್ನ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವುದು. 24ರಂದು ಬೆಳಗ್ಗೆ 9.50 ಮೂಡುಬಿದಿರೆ ಪ್ರವಾಸಿ ಮಂದಿರ. 11.15 ಜೈನ್ ಪ್ರೌಢಶಾಲೆ, ಪ್ರಾಥಮಿಕ ಶಾಲೆಗೆ ಭೇಟಿ, ಸಂಜೆ 3ಕ್ಕೆ ಮಂಗಳೂರಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ, ಕಾರ್ಯಕರ್ತರ ಜತೆ ಚರ್ಚೆ. 3.45ಕ್ಕೆ ಸರ್ಕ್ಯೂಟ್ ಹೌಸ್ನಲ್ಲಿ ಸಂಸದ, ಶಾಸಕರು, ಮುಖಂಡರ ಜತೆ ಚರ್ಚೆ. 4.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಭಯ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರೆ ಇಲಾಖಾ ಅಧಿಕಾರಿಗಳ ಸಭೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.