ಅತಿಥಿ ಉಪನ್ಯಾಸಕ ಹುದ್ದೆಗೆ ಆಹ್ವಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳಲ್ಲಿ ಹಾಗೂ ಮಂಗಳೂರು ಮತ್ತು ಮಡಿಕೇರಿಯಲ್ಲಿರುವ ಘಟಕ ಕಾಲೇಜುಗಳಲ್ಲಿ 2012-14ನೇ ಸಾಲಿಗೆ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಯೊಂದಿಗೆ ಕುಲಸಚಿವರ ಕಚೇರಿ, ಆಡಳಿತ ಸೌಧ, ಮಂಗಳೂರು ವಿವಿ, ಮಂಗಳಗಂಗೋತ್ರಿ-574199 ಇಳ್ಲಿ ನೇರ ಸಂದರ್ಶನಕ್ಕೆ ಕೆಳಗಿನ ದಿನಾಂಕಗಳಂದು ಹಾಜರಾಗುವುದು. ಯುಜಿಸಿ/ಎಸ್ಎಲ್ಇಟಿ ಉತ್ತೀರ್ಣತೆ, ಪಿಎಚ್ಡಿ, ಎಂಫಿಲ್ ಪದವಿ ಪಡೆದವರಿಗೆ ಆದ್ಯತೆ. ವಿವರಕ್ಕೆ ವಿವಿ ವೆಬ್ಸೈಟ್-ಢಿಢಿಢಿ.ಟಛಟ್ಜಿಛಟ್ಟ್ಠಜ್ಡಟ್ಝಿಢಜ್ಠಡ್ಝಡಿಣ.ಛ್ಛ.್ಝಟಿ ಸಂಪರ್ಕಿಸಬಹುದು.
ಜೂ.26ರಂದು ಬೆಳಗ್ಗೆ 9ಕ್ಕೆ ಸಂಸ್ಕೃತ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವ ವಿಜ್ಞಾನ. ಮಧ್ಯಾಹ್ನ 1.30ಕ್ಕೆ ವಾಣಿಜ್ಯ ಶಾಸ್ತ್ರ ಮತ್ತು ಮೆನೇಜ್ಮೆಂಟ್, ಎಚ್ಆರ್ಡಿ, ಪ್ರವಾಸೋದ್ಯಮ ಆಡಳಿತ. 27ರಂದು ಬೆಳಗ್ಗೆ 9ಕ್ಕೆ ಗಣಕ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕೈಗಾರಿಕಾ ರಸಾಯನ ಶಾಸ್ತ್ರ. ಮಧ್ಯಾಹ್ನ 1.30ಕ್ಕೆ ಗಣಿತಶಾಸ್ತ್ರ, ಆನ್ವಯಿಕ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ/ಆನ್ವಯಿಕ ಪ್ರಾಣಿಶಾಸ್ತ್ರ, ಜೀವವಿಜ್ಞಾನ, ಸಂಖ್ಯಾಶಾಸ್ತ್ರ ವಿಷಯಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ನಡೆಯಲಿದೆ.