ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅರಸೀಕೆರೆ ಮೂಲಕ ಮಂಗಳೂರು-ಬೆಂಗಳೂರು ರೈಲು: ಖರ್ಗೆಗೆ ಪತ್ರ

Lingaraj Badiger
Updated On : 21 Jun 2013, 12:03 pm

ಮಂಗಳೂರು: ಮಂಗಳೂರು-ಬೆಂಗಳೂರು ಪ್ರಸ್ತಾವಿತ ಸಾಪ್ತಾಹಿಕ ರೈಲನ್ನು ಅರಸೀಕೆರೆ ಮೂಲಕ ಓಡಿಸುವಂತೆ ವೇಳಾಪಟ್ಟಿ ಪ್ರಕಟಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದಾರೆ.
2013-14ನೇ ರೇಲ್ವೆ ಬಜೆಟ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ವಾರಕ್ಕೊಮ್ಮೆ ಒಂದು ಬಾರಿ ಓಡಿಸುವಂತೆ ಘೋಷಣೆ ಮಾಡಲಾಗಿದೆ. ಈ ರೈಲು ಅರಸೀಕೆರೆ ಮೂಲಕ ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವಂತೆ ವೇಳಾಪಟ್ಟಿ ರಚಿಸುವಂತೆ ಒತ್ತಾಯಿಸಲಾಗಿತ್ತು. ಈಗಿನ ಮಾಹಿತಿ ಪ್ರಕಾರ, ಈ ರೈಲನ್ನು ಬೆಂಗಳೂರು-ಬಂಗಾರುಪೇಟೆ-ಸೇಲಂ-ಕಣ್ಣೂರು ಮೂಲಕ ಮಂಗಳೂರು ಮಧ್ಯೆ ಸಂಚರಿಸಲಿದೆ.
ರೇಲ್ವೆಯಲ್ಲಿ ಕರ್ನಾಟಕ ದೇಶದಲ್ಲೇ ಅತೀ ಹೆಚ್ಚು ಪಾಲುದಾರಿಕೆ ಹೊಂದಿರುವ ಏಕೈಕ ರಾಜ್ಯ. ಆದರೆ ಪ್ರತಿ ವರ್ಷ ಕರಾವಳಿ ಕರ್ನಾಟಕದ ರೇಲ್ವೆ ಬೇಡಿಕೆಗಳ ಬಗ್ಗೆ ನಿರಾಕರಣೆ ಮತ್ತು ನಿರ್ಲಕ್ಷ ಭಾವನೆ ತೋರುತ್ತಿರುವುದು ವಿಷಾದನೀಯ. ರಾಜಧಾನಿಯಿಂದ ಮತ್ತು ಇತರ ಕಡೆಗಳಿಂದ ಮಂಗಳೂರು ಸಂಪರ್ಕಿಸುವ ಹೊಸ ರೈಲುಗಳಿಗೆ ಬೇಡಿಕೆ ಇಟ್ಟಿದ್ದರೂ ಇಲಾಖೆ ಹಾಗೂ ಈವರೆಗಿನ ರೇಲ್ವೆ ಸಚಿವರು ಸೂಕ್ತವಾಗಿ ಸ್ಪಂದಿಸದಿರುವುದು ಜನಸಾಮಾನ್ಯರಿಗೆ ಮಾಡಿದ ಅನ್ಯಾಯವಾಗಿದೆ ಎಂದಿದ್ದಾರೆ.
ಕರಾವಳಿಯ ಪ್ರಮುಖ ಬೇಡಿಕೆಗಳು
ಮಂಗಳೂರು ಪ್ರತ್ಯೇಕ ರೇಲ್ವೆ ವಿಭಾಗ ರಚಿಸಿ ಹುಬ್ಬಳ್ಳಿ ರೇಲ್ವೆ ವಲಯದೊಂದಿಗೆ ಜೋಡಿಸುವುದು. ಇಲ್ಲವೇ ಮಂಗಳೂರನ್ನು ಕೇರಳದಿಂದ ಪ್ರತ್ಯೇಕಿಸಿ ಮೈಸೂರು ರೇಲ್ವೆ ವಲಯಕ್ಕೆ ವರ್ಗಾಯಿಸುವುದು.
ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸುವುದು.
ಮಂಗಳೂರು-ಬೆಂಗಳೂರು ಮಧ್ಯೆ ಅರಸೀಕೆರೆ ಮಾರ್ಗವಾಗಿ 2ನೇ ಹೊಸ ರಾತ್ರಿ ರೈಲು. ಕಾರವಾರ-ಯಶವಂತಪುರ ಹಗಲು ರೈಲನ್ನು ಪ್ರತಿ ದಿನ ಓಡಿಸುವುದು.
ಸುಬ್ರಹ್ಮಣ್ಯ ಮಾರ್ಗ ರೈಲು ನಿಲ್ದಾಣವನ್ನು ಪ್ರಾಥಮಿಕ ಸೌಲಭ್ಯ ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದು.
ಕರಾವಳಿ ಮಂಗಳೂರು, ಉಡುಪಿಗೆ ಹೆಚ್ಚು ಹೊಸ ರೈಲುಗಳ ಬೇಡಿಕೆ.
ಚೆರ್ವತ್ತೂರು-ಮಂಗಳೂರು ಪ್ಯಾಸೆಂಜರ್(56661)ರೈಲು ಮತ್ತು ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಪ್ರತಿದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಆಗಮಿಸುವುದು.
ಕಬಕ ಪುತ್ತೂರು ರೈಲನ್ನು ರಾತ್ರಿ ಸುಬ್ರಹ್ಮಣ್ಯ ಮಾರ್ಗ ವರೆಗೆ ವಿಸ್ತರಿಸಿ ಕಾಣಿಯೂರು, ಎಡಮಂಗಲ, ಸುಬ್ರಹ್ಮಣ್ಯ ಪ್ರದೇಶದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು. ಮಂಗಳೂರು-ಸುಬ್ರಹ್ಮಣ್ಯ ನಡುವೆ ದ್ವಿಪಥ ಹಳಿ ನಿರ್ಮಾಣ.
ನೇರಳಕಟ್ಟೆಯಲ್ಲಿ ಪ್ಯಾಸೆಂಜರ್ ರೈಲಿಗೆ ನಿಲುಗಡೆ ಮತ್ತು ಮೇಲ್ಸೇತುವೆ ಕಾಲುದಾರಿ ನಿರ್ಮಾಣ. ಬಂಟ್ವಾಳ ನಿಲ್ದಾಣದಲ್ಲಿ ಫ್ಲ್ಯಾಟ್‌ಫಾರ್ಮ್ ಛಾವಣಿ ಮತ್ತು 2ನೇ ಫ್ಲ್ಯಾಟ್‌ಫಾರ್ಮ್ ನಿರ್ಮಾಣದೊಂದಿಗೆ ಮೇಲ್ಸೇತುವೆ ಕಾಲುದಾರಿ. ಕಬಕ ಪುತ್ತೂರು ನಿಲ್ದಾಣದ ಆದರ್ಶ ನಿಲ್ದಾಣ ಕಾಮಗಾರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement