ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚಾರ್ಲ್ಸ್ ಸಿಕ್ವೇರಗೆ ಕರಾವಳಿ ಕೊಂಕಣ್ಸ್ ಕಲಾ ಪ್ರಶಸ್ತಿ

Rashmi Kasaragodu
Updated On : 21 Jun 2013, 11:58 am

ಮಂಗಳೂರು: ಕರಾವಳಿ ಕೊಂಕಣ್ಸ್ ಕಲಾ ಪ್ರಶಸ್ತಿಗೆ ಕಲಾವಿದ ಚಾರ್ಲ್ಸ್ ಸಿಕ್ವೇರ ಅವರನ್ನು ಆಯ್ಕೆ ಮಾಡಿರುವುದಾಗಿ ಕರಾವಳಿ ಕೊಂಕಣ್ಸ್ ಅಧ್ಯಕ್ಷ ಲೆಸ್ಲಿ ರೇಗೊ ತಿಳಿಸಿದ್ದಾರೆ.
ಆ.14ರಂದು ಸಂಘದ ವಾರ್ಷಿಕ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 50 ಸಾವಿರ ನಗದು, ಸನ್ಮಾನ ಪತ್ರ, ಸ್ಮರಣಿಕೆ ಹೊಂದಿದೆ. ಚಾರ್ಲ್ಸ್ ಸಿಕ್ವೇರ ಕೊಂಕಣಿ ರಂಗಭೂಮಿ ಶ್ರೇಷ್ಠ ಕಲಾವಿದರು.
ಖಳ ನಟ ಮತ್ತು ಹಾಸ್ಯ ಪಾತ್ರ ಅದ್ಭುತವಾಗಿ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದು, ವಿಲ್ಫಿ ರೆಬಿಂಬಿಸ್ ರಚಿಸಿದ ಕೇಡಿ ಬೋನೋ, ಬಿಎ ನಾಟಕದಲ್ಲಿ ಇವರ ಪಾತ್ರ ಸ್ಮರಣೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement