ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಿಲ್ಲಾ ಕಾರಾಗೃಹ ಜೈಲರ್ ಅಮಾನತು

Lingaraj Badiger
Updated On : 21 Jun 2013, 12:14 pm

ಮಂಗಳೂರು: ಜಿಲ್ಲಾ ಕಾರಾಗೃಹದ ಜೈಲರ್ ಮಹೇಶ್ ಅವರನ್ನು ಅಮಾನತ್ತುಗೊಳಿಸಿ, ಬಂಧಿಖಾನೆ ಡಿಐಜಿ ಆದೇಶ ಹೊರಡಿಸಿದ್ದಾರೆ.  ಮೈಸೂರು ವಿಭಾಗೀಯ ಡಿಐಜಿ ಇತ್ತೀಚೆಗೆ ಜೈಲ್‌ಗೆ ದಾಳಿ ನಡೆಸಿ 12 ಮೊಬೈಲ್, ಗಾಂಜಾ ವಶಪಡಿಸಿದ್ದರು. ಈ ಹಿನ್ನಲೆಯಲ್ಲಿ ಜೈಲರ್ ಕರ್ತವ್ಯಲೋಪ ಕಂಡುಬಂದ ಹಿನ್ನಲೆ ಡಿಐಜಿ ವಿಶ್ವನಾಥಯ್ಯ ಈ ಆದೇಶ ಹೊರಡಿಸಿದ್ದಾರೆ.
ಇಂದು ಉಚಿತ ತಪಾಸಣೆ
ಮಂಗಳೂರು: ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವಾಜಪೇಯಿ ಆರೋಗ್ಯಶ್ರೀ ವತಿಯಿಂದ ಬಿಪಿಎಲ್ ಕಾರ್ಡುದಾರರಿಗೆ ಜೂ. 21 ರಂದು ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೃದಯರೋಗ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಹೃದಯ, ಮೂತ್ರಪಿಂಡ, ಮಕ್ಕಳ ಶಸ್ತ್ರಚಿಕಿತ್ಸೆ ತಪಾಸಣೆ ನಡೆಯಲಿದೆ. ಶಿಬಿರದಲ್ಲಿ ಉಚಿತ ಇಸಿಜಿ, ಹೃದಯ ಸ್ಕ್ಯಾನಿಂಗ್, ಮಧುಮೇಹ ತಪಾಸಣೆ ನಡೆಸಲಾಗುತ್ತದೆ. ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹಾಗೂ ಹಳೆಯ ವೈದ್ಯಕೀಯ ವರದಿ ತರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement