ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಟಕ ಕಲಾವಿದ ವೈ. ಆನಂದ ಹೆಗ್ಡೆ

Lingaraj Badiger
Updated On : 21 Jun 2013, 12:05 pm

ಕಾಪು: ಅಜೆಕಾರಿನ ನಿವೃತ್ತ ಶಿಕ್ಷಕ, ನಾಟಕ ಕಲಾವಿದ ವೈ. ಆನಂದ ಹೆಗ್ಡೆ (90) ಅಲ್ಪಕಾಲದ ಅನಾರೋಗ್ಯದಿಂದ ಜೂ.14ರಂದು ನಿಧನರಾಗಿದ್ದಾರೆ. ಅಜೆಕಾರು ಹಿ.ಪ್ರಾ. ಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದ ಹೆಗ್ಡೆ ಮೂಲತಃ ಕಟ್ಟಾಡಿ ಏಣಗುಡ್ಡೆ ಪಟೇಲರ ಮನೆತನವರು, ತುಳು ನಾಟಕ ರಂಗದ ಪ್ರಸಿದ್ಧ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ತಂಡದಲ್ಲಿ ಅನೇಕ ವರ್ಷಗಳ ಕಲಾವಿದರಾಗಿ ಜನಾನುರಾಗಿಯಾದ್ದರು. ಭಜನೆ, ನೃತ್ಯ, ಬರಹ, ನಾಟಕ, ಯಕ್ಷಗಾನ, ತಾಳಮದ್ದಳೆ ಇತ್ಯಾದಿ ಕ್ಷೇತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದರು. ಅವರಿಗೆ ಮುಂಬೈನ ಹಿರಿಯ ಪತ್ರಕರ್ತ ಕುಂಠಿನಿ ಪ್ರಕಾಶ್ ಹೆಗ್ಡೆ ಸೇರಿದಂತೆ ಮೂರು ಮಂದಿ ಗಂಡು ಮಕ್ಕಳಿದ್ದಾರೆ.
ಕೊಡವೂರು ಗಣೇಶ್ ರಾವ್
ಉಡುಪಿ: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದ ಕೊಡವೂರಿನ ಗಣೇಶ್ ರಾವ್ ಎಂ. (58) ಅಸೌಖ್ಯದಿಂದ ಜೂ.16ರಂದು ನಿಧನ ಹೊಂದಿದರು. ನಾಟಕ ಕಲಾವಿದರಾಗಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಸಿ ಜನಮೆಚ್ಚುಗೆ ಗಳಿಸಿದ್ದರು. ಅಭಿನಯಿಸಿದ ಎಲ್ಲಾ ನಾಟಕಗಳಲ್ಲೂ ಪ್ರಧಾನ ಸ್ರೀಪಾತ್ರ ನಿರ್ವಹಿಸಿ ಮನೋಜ್ಞ ಅಭಿನಯನದ ಮೂಲಕ ಪಾತ್ರಕ್ಕೆ ಜೇವ ತುಂಬುತಿದ್ದ ಅವರು ಭರತನಾಟ್ಯ ಹಾಗು ಯಕ್ಷಗಾನದಲ್ಲೂ ಪ್ರತಿಭೆ ಮೆರೆದಿದ್ದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಸುಲೈಮಾನ್ ನಿಡ್ಯಾಣ (47)
ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿಡ್ಯಾಣ ನಿವಾಸಿ, ಪ್ರಸ್ತುತ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿರುವ ದಿ. ಇಬ್ರಾಹಿಂ ಎಂಬವರ ಪುತ್ರ, ಮರದ ವ್ಯಾಪಾರಿ ಸುಲೈಮಾನ್ ನಿಡ್ಯಾಣ (47) ಹೃದಯಾಘಾತದಿಂದ ಗುರುವಾರ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement