ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆ ಕಾನೂನು ಕಾರ್ಯಾಗಾರ

Lingaraj Badiger
Updated On : 21 Jun 2013, 12:14 pm

ಮಂಗಳೂರು: ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜೂ. 22 ರಂದು ಬೆಳಗ್ಗೆ 11ಕ್ಕೆ ಪತ್ರಿಕಾ ಭವನದಲ್ಲಿ ಕಾನೂನು ಕಾರ್ಯಾಗಾರ ನಡೆಯಲಿದೆ.
ಹಿರಿಯ ನ್ಯಾಯವಾದಿ ಶಂಕರ ಭಟ್ ಅವರು ಮಾಧ್ಯಮ ಮತ್ತು ಕಾನೂನು ವಿಷಯದಲ್ಲಿ ಕಾರ್ಯಾಗಾರ ನಡೆಸಿಕೊಡುವರು ಎಂದು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಕಿರಣ್ ಯು. ಸಿರ್ಸೀಕರ್ ತಿಳಿಸಿದ್ದಾರೆ.
ನಾಳೆ ಸಾಮೂಹಿಕ
ಸೀಯಾಳಾಭಿಷೇಕ
ಮಂಗಳೂರು: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಜೂ. 22 ರಂದು ಬೆಳಗ್ಗೆ 10ಕ್ಕೆ ದೇವಳದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸುಭೀಕ್ಷ ಫಲ ಪ್ರಾಪ್ತಿಗಾಗಿ ಸಾಮೂಹಿಕ ಸೀಯಾಳಾಭಿಷೇಕ ನಡೆಯಲಿದೆ. ಸಾರ್ವಜನಿಕರು ದೇವಳದ ಕಚೇರಿಗೆ ಸೀಯಾಳವನ್ನು ತಂದೊಪ್ಪಿಸಬಹುದು. ಪೂಜೆಯಲ್ಲಿ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳುತ್ತಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement