ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಯೋಫೈಟ್ ಕೀಟನಾಶಕ ಅಪಾಯಕಾರಿ

Rashmi Kasaragodu
Updated On : 21 Jun 2013, 12:43 pm

ಉಪ್ಪಿನಂಗಡಿ: ಕೃಷಿಕರು ತಮ್ಮ ಬೆಳೆಗಳ ರಕ್ಷಣೆಗಾಗಿ ಬಳಸುತ್ತಿರುವ ಕ್ರಿಮಿನಾಶಕ ಬಯೋಫೈಟ್ ಕೂಡಾ ತೀರಾ ಅಪಾಯಕಾರಿ. ಇದನ್ನು ಕೃಷಿ ಚಟುವಟಿಕೆಗೆ ಬಳಸುವುದು ಸೂಕ್ತವಲ್ಲ ಎಂದು ದೆಹಲಿಯಲ್ಲಿ ನಡೆಸಿದ ಪರೀಕ್ಷೆಯಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಎಂಡೋ ಸಲ್ಫಾನ್ನಂತೆಯೇ ಕ್ರಿಮಿನಾಶಕ ಬಯೋಫೈಟ್ ಕೂಡಾ ಹಾನಿಕಾರಕ ಎಂಬುವುದನ್ನು ಕೃಷಿ ಅಧಿಕಾರಿಗಳು ಕೊಕ್ಕಡ ಗ್ರಾಮಸಭೆಯಲ್ಲಿ ಪ್ರಕಟಿಸಿದರು. ಕೊಕ್ಕಡದ ಅಂಬೇಡ್ಕರ್ ಭವನದಲ್ಲಿ ಗ್ರಾಪಂ ಅಧ್ಯಕ್ಷೆ ವಸಂತಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗಮನ ಸಳೆಗೆ ಪ್ರಶ್ನೆಗೆ ಕೃಷಿ ಅಧಿಕಾರಿಗಳು ಉತ್ತರಿಸಿದರು.
ತಡೆಗಟ್ಟಲು ಆಗ್ರಹ: ಕೊಕ್ಕಡದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ವಿಚಾರ ಪ್ರಸ್ತಾಪಿಸಿ, ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಅಪಾಯಕಾರಿ ಕೀಟನಾಶಕ ಎಂದು ಸಾಬೀತಾಗಿದೆ. ಆದರೂ ಇದು ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಲಭ್ಯವಿರುವುದನ್ನು ಮಾನವೀಯ ಕಾರಣಕ್ಕಾಗಿಯಾದರೂ ಮೊದಲು ತಡೆಗಟ್ಟುವುದು ಅಗತ್ಯ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement