ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಯೋಫೈಟ್ ಕೀಟನಾಶಕ ಅಪಾಯಕಾರಿ: ವರದಿ

Lingaraj Badiger
Updated On : 21 Jun 2013, 12:02 pm

ಉಪ್ಪಿನಂಗಡಿ: ಕೃಷಿಕರು ತಮ್ಮ ಬೆಳೆಗಳ ರಕ್ಷಣೆಗಾಗಿ ಈಗ ಬಳಸುತ್ತಿರುವ ಕ್ರಿಮಿನಾಶಕ ಬಯೋಫೈಟ್ ಕೂಡಾ ತೀರಾ ಅಪಾಯಕಾರಿ ವಿಷವಾಗಿದೆ. ಇದನ್ನು ಕೃಷಿ ಚಟುವಟಿಕೆಗೆ ಬಳಸುವುದು ಅಪಾಯಕಾರಿ ಎಂದು ದೆಹಲಿಯಲ್ಲಿ ನಡೆದ ಪರೀಕ್ಷಾ ವರದಿಯಲ್ಲಿ ಸಾಬೀತಾಗಿದೆ.
 ಈ ನಿಟ್ಟಿನಲ್ಲಿ ಎಂಡೋ ಸಲ್ಫಾನ್‌ನಂತೆಯೇ ಕ್ರಿಮಿನಾಶಕ ಬಯೋಫೈಟ್ ಕೂಡಾ ಹಾನಿಕಾರಕ ಎಂಬುವುದನ್ನು ಕೃಷಿ ಅಧಿಕಾರಿಗಳು ಕೊಕ್ಕಡ ಗ್ರಾಮಸಭೆಯಲ್ಲಿ ಪ್ರಕಟಿಸಿದ್ದಾರೆ. ಕೊಕ್ಕಡದ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ವಸಂತಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗಮನ ಸೆಳೆದ ಈ ಪ್ರಶ್ನೆಗೆ ಕೃಷಿ ಅಧಿಕಾರಿಗಳು ಉತ್ತರಿಸಿದರು.
ತಡೆಗಟ್ಟಲು ಆಗ್ರಹ: ಕೊಕ್ಕಡದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ವಿಚಾರ ಪ್ರಸ್ತಾಪಿಸಿ, ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಅಪಾಯಕಾರಿ ಕೀಟನಾಶಕ ಎಂದು ಸಾಬೀತಾದ ಮೇಲೂ ಇದು ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಲಭ್ಯವಿರುವುದನ್ನು ಮಾನವೀಯ ಕಾರಣಕ್ಕಾಗಿಯಾದರೂ ಮೊದಲು ತಡೆಗಟ್ಟುವುದು ಅತಿ ಅಗತ್ಯ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದರು.
ಚರ್ಚಾನಿಯಂತ್ರಣ ಅಧಿಕಾರಿಯಾಗಿ ತಾಲೂಕು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಗೌಡ ಇದ್ದರು. ಜಿ.ಪಂ. ಸದಸ್ಯೆ ಧನಲಕ್ಷ್ಮೀ ಜನಾರ್ದನ್, ತಾ.ಪಂ. ಅಧ್ಯಕ್ಷ ಕೇಶವ, ತಾ.ಪಂ. ಸದಸ್ಯೆ ಸುಗುಣಾ, ಎಪಿಎಂಸಿ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗ್ರಾ.ಪಂ. ಸದಸ್ಯರು ಇದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೀವಿ ಶೆಟ್ಟಿ ಸ್ವಾಗತಿಸಿದರು.
--
ನಾಳೆಯಿಂದ ಚೆಸ್ ತರಬೇತಿ
ಮೂಡುಬಿದಿರೆ: ಮಂಗಳೂರಿನ ಡೆರಿಕ್ ಚೆಸ್ ಸ್ಕೂಲ್ ಸಹಯೋಗದಲ್ಲಿ ಮೂಡುಬಿದಿರೆಯ ಡಿ.ಜೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 22ರಿಂದ ಪ್ರತಿ ಶನಿವಾರ ಮಧ್ಯಾಹ್ನ 2.30ರಿಂದ 4.30ರವರೆಗೆ ಚೆಸ್ ತರಬೇತಿ ನಡೆಯಿದೆ. ಇದರಲ್ಲಿ ಆರಂಭಿಕ ಹಂತ ಮತ್ತು ಇಂಟರ್ ಮೀಡಿಯೇಟ್ ಹಂತದ ತರಬೇತಿ ನೀಡುತ್ತಿದ್ದು, ಎಲ್ಲ ವಯೋವಾನದ ಕಲಿಕಾರ್ಥಿಗಳಿಗೆ ಮುಕ್ತ ಅವಕಾಶವಿದೆ ಎಂದು ಸಂಯೋಜಕ ಗುರು ಬಾಗೇವಾಡಿ(9964242991)ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement