ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸುರಕ್ಷಿತ
ಗೋಕರ್ಣ: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಋಷಿಕೇಶದ ಪರಮಾರ್ಥ ನಿಕೇತನದಲ್ಲಿ ವಾಸ್ತವ್ಯ ಮಾಡಿದ್ದು, ಸುರಕ್ಷಿತವಾಗಿದ್ದಾರೆ. ಶ್ರೀಗಳು ತಮ್ಮ 80 ಶಿಷ್ಯರೊಂದಿಗೆ ಅಲ್ಲಿ ವಾಸ್ತವ್ಯ ಮಾಡಿದ್ದು, ಪರಮಾರ್ಥ ನಿಕೇತನದ ಮುನೀಜಿ ಜತೆಯಲ್ಲಿ ಗಂಗಾ ಆರತಿ ಪೂರೈಸಿದ್ದಾರೆ. ಶ್ರೀಗಳು ಜೂ. 24ರಂದು ಮಾನಸ ಸರೋವರ ಯಾತ್ರೆ ನಡೆಸಲಿದ್ದಾರೆಂದು ಮಠದ ಮೂಲಗಳು ತಿಳಿಸಿವೆ.