ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಪ್ರೀಂ ಆದೇಶ: 31 ವರ್ಷ ನಂತರ ಮನೆ ಖಾಲಿ ಮಾಡಿದ ಮಾಜಿ ಎಂಪಿ

Rashmi Kasaragodu
Updated On : 21 Jun 2013, 12:38 pm

ಮಂಗಳೂರು: ರಾಜ್ಯಸಭೆ ಸದಸ್ಯರಾಗಿದ್ದ ಬಿ. ಇಬ್ರಾಹಿಂಗೆ 31 ವರ್ಷಗಳ ಹಿಂದೆ ಬಾಡಿಗೆ ಮನೆ ನೀಡಿದ ಯೇನೆಪೋಯ ಅಬ್ದುಲ್ ಕುಂಞ ಸುಪ್ರೀಂ ಕೋರ್ಟ್ಗೆ ತೆರಳಿ ಮನೆ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
1982ರಲ್ಲಿ ಇಬ್ರಾಹಿಂ ಅವರ ಕಡು ಬಡತನ ಕಂಡು ಕುಲಶೇಖರದ 12 ಸೆಂಟ್ಸ್ನಲ್ಲಿ ಮನೆಯನ್ನು ತಿಂಗಳಿಗೆ 200ರಂತೆ ಬಾಡಿಗೆ ನೀಡಿದ್ದರು. 6 ತಿಂಗಳೊಳಗೆ ಮನೆ ಖಾಲಿ ಮಾಡುವುದಾಗಿ ಹೇಳಿದ್ದ ಇಬ್ರಾಹಿಂ ಮನೆ ಬಿಡಲು ಒಪ್ಪಲೇ ಇಲ್ಲ. ಮನೆ ಬಿಡಿಸಲು ಕುಂಞ ಮಾಡಿರುವ ಯತ್ನ ಫಲ ನೀಡಲೇ ಇಲ್ಲ.   2004ರಲ್ಲಿ ಕುಂಞ ಇಬ್ರಾಹಿಂ ವಿರುದ್ಧ ಮಂಗಳೂರು ಮುನ್ಸಿಫ್ ಕೋರ್ಟ್ನಲ್ಲಿ ದಾವೆ ಹೂಡಿದರು.  ಹೈಕೋರ್ಟ್ವರೆಗೂ ಎಲ್ಲ ನ್ಯಾಯಾಲಯಗಳು ಮನೆ ಖಾಲಿ ಮಾಡುವಂತೆ ಆದೇಶಿಸಿದ್ದವು. ಇದನ್ನು ಪ್ರಶ್ನಿಸಿ ಇಬ್ರಾಹಿಂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. 2013ರ ಏಪ್ರಿಲ್ನಲ್ಲಿ ಮನೆ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಕೂಡಾ ಅಫಿಡವಿಟ್ ಸಲ್ಲಿಸಿದ 4 ವಾರಗಳೊಳಗೆ ಮನೆ ಖಾಲಿ ಮಾಡಲು ಷರತ್ತು ವಿಧಿಸಿತು.  ಇಬ್ರಾಹಿಂ ಅಫಿಢವಿಟ್ ಸಲ್ಲಿಸಲೇ ಇಲ್ಲ. ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವ ಅದೇಶ ನೀಡುವಂತೆ ಕುಂಞ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ವಾರಂಟ್ ಹೊರಡಿಸಿತು. ಇಬ್ರಾಹಿಂ ತಾನಾಗಿಯೇ ಮನೆ ಬೀಗ ಕೀಲಿ ಕೈಯನ್ನು ಕೋರ್ಟ್ಗೆ ಒಪ್ಪಿಸಿದರು. ಮಂಗಳೂರು ಗ್ರಾಮಾಂತರ ಪೊಲೀಸರ ಮೂಲಕ ಮನೆ ಬೀಗ ಮುರಿದು ಮನೆಯನ್ನು ಕುಂಞಗೆ ಹಸ್ತಾಂತರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement