ಅತ್ಯಾಚಾರ ಯತ್ನ; ಯುವಕ ಸೆರೆ
ಸುಳ್ಯ: ಮನೆಯಲ್ಲಿ ಯುವತಿಯೊಬ್ಬಳೇ ಇರುವುದನ್ನು ತಿಳಿದ ಯುವಕ ಆಕೆಯ ಮನೆಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ ಕುರಿತು ಯುವತಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾಳೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಅತ್ತಿಮಾರಡ್ಕದ ಸುಂದರ (38) ಎಂಬಾತ ಆರೋಪಿ. ಈತ ಜೀರ್ಮುಕಿಯ ಯುವತಿ ಮನೆಗೆ ಭಾನುವಾರ ಬಂದು ಆಕೆಗೆ 500 ನೋಟನ್ನು ತೋರಿಸಿ ಹೆಗಲ ಮೇಲೆ ಕೈ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದನೆಂದೂ, ಈ ವೇಳೆ ಯುವತಿ ಬೊಬ್ಬೆ ಹಾಕಿದಾಗ ಆತ ಪರಾರಿಯಾದನೆಂದೂ ಯುವತಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
'ಬ್ರಾಹ್ಮಣರ ಬೈದು ಪ್ರಚಾರ ಸಲ್ಲ'
ಕುಂದಾಪುರ: ಬುದ್ಧಿವಂತ ಮತ್ತು ಸಮಾಜದ ಮಾರ್ಗದರ್ಶಕ ಜನಾಂಗ ಎಂದು ಗೌರವಿಸಲ್ಪಡುತ್ತಿರುವ ಬ್ರಾಹ್ಮಣರನ್ನು ಇಂದು ಬೈದರೆ ಪ್ರಚಾರ ಸಿಗುತ್ತದೆ. ಎಲ್ಲ ಅನಿಷ್ಟಗಳಿಗೆ ಬ್ರಾಹ್ಮಣರನ್ನು ಹೊಣೆ ಮಾಡುವ ಖಯಾಲಿ ನಿಲ್ಲಬೇಕು ಎಂದು ನಿವೃತ್ತ ಅಧ್ಯಾಪಕ, ಅಂಕಣಕಾರ ಕೋ. ಶಿವಾನಂದ ಕಾರಂತ ಹೇಳಿದ್ದಾರೆ. ಕೊಟೇಶ್ವರದ ಶ್ರೀ ವಾದಿರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ 19ನೇ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿ, ಮೌನ ಮತ್ತು ಅಸಂಘಟನೆಯೇ ಬ್ರಾಹ್ಮಣರ ಲಕ್ಷಣ ಎಂದರು.