ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

1068 ಪ್ರಕರಣ ಇತ್ಯರ್ಥ

Rashmi Kasaragodu
Updated On : 2 Mar 2013, 12:01 pm

ಮಂಗಳೂರು: ರಾಜ್ಯ ಮಾನವ ಹಕ್ಕು ಆಯೋಗದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 2007ರಿಂದ ಇದುವರೆಗೆ 1,746 ಪ್ರಕರಣ ದಾಖಲಾಗಿದ್ದು, 1068 ಇತ್ಯರ್ಥ ಪಡಿಸಲಾಗಿದೆ. 678 ಪ್ರಕರಣ ಬಾಕಿ ಇದೆ ಎಂದು ಆಯೋಗ ಸದಸ್ಯ ಎಸ್.ಜಿ.ಹುನಗುಂದ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಮಾತು ಕತೆ ನಡೆಸಿದರು. ಜಿಲ್ಲೆಯಲ್ಲಿ ಈ ವರ್ಷ 130 ದೂರು ಬಂದಿದೆ, ಜಿಲ್ಲಾಧಿಕಾರಿಗೆ ಹಸ್ತಾಂತರ ಮಾಡಿದ್ದೇನೆ ಎಂದರು. ಎಂಡೋಸಲ್ಫಾನ್  ಪೀಡಿತರ ಬಗ್ಗೆ ಅಪಾರ ಸಹಾನುಭೂತಿ ಇದೆ. ಆಯೋಗದ ಅಧ್ಯಕ್ಷರು ಕೂಡಾ ಇದೇ ಅಭಿಪ್ರಾಯ ಹೊಂದಿದ್ದರು ಎಂದ ಹುನಗುಂದ, ಪ್ರತಿ ಕೆಲಸದಲ್ಲಿ ಮಾನವೀಯತೆ ಇರಲಿ ಎಂದು ಸಲಹೆ ಮಾಡಿದರು. ಪ್ರತಿಯೊಬ್ಬರು ಮಾನವೀಯತೆಯಿಂದ ಕೆಲಸ ಮಾಡಿದರೆ ನಿಮ್ಮ ಕೆಲಸವೂ ಸುಲಭ ಎಂದು ಜಿಲ್ಲಾಧಿಕಾರಿ ಪ್ರಕಾಶ್ ಸಲಹೆ ಮಾಡಿದರು. ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement