17ರಂದು ಡಾ.ತಾಳ್ತಜೆ ಅಭಿನಂದನೆ
ಪುತ್ತೂರು: ಹಿರಿಯ ಸಂಶೋಧಕ, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಅಭಿನಂದನಾ ಕಾರ್ಯಕ್ರಮ ಹಾಗೂ 'ಅಯನ' ಅಭಿನಂದನಾ ಗ್ರಂಥ ಸಮರ್ಪಣೆ ಸಮಾರಂಭ 17ರಂದು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ನಡೆಯಲಿದ್ದು, ಈ ಬಗ್ಗೆ ಸಮಾಲೋಚನಾ ಸಭೆ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಸಭೆಯಲ್ಲಿ ಡಾ.ತಾಳ್ತಜೆ ವಸಂತ ಕುಮಾರ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ರಾಮ ಭಟ್ ಉರಿಮಜಲು, ಗೌರವ ಸಲಹೆಗಾರ ಪುರಂದರ ಭಟ್, ಕಾರ್ಯಾಧ್ಯಕ್ಷ ಪ್ರೊ.ಎ.ವಿ.ನಾರಾಯಣ, ಉಪಾಧ್ಯಕ್ಷ ಕಜೆ ಈಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಡಾ.ಗೋವಿಂದ ಪ್ರಸಾದ್ ಕಜೆ, ಕಾರ್ಯದರ್ಶಿಗಳಾದ ಡಾ.ಶ್ರೀಧರ ಎಚ್.ಜಿ, ಹರಿಣಾಕ್ಷಿ ಎಂ.ಡಿ, ಸಂಚಾಲಕರಾದ ಡಾ.ಎಚ್.ಮಾಧವ ಭಟ್, ಡಾ.ವರದರಾಜ ಚಂದ್ರಗಿರಿ ಮತ್ತು ಸದಸ್ಯರಾದ ಪ್ರೊ.ವೇದವ್ಯಾಸ, ಡಾ.ರಾಜಶ್ರೀ ಮೊದಲಾದವರು ಇದ್ದು ಕಾರ್ಯಕ್ರಮದ ರೂಪುರೇಷೆ ಮತ್ತು ಸಿದ್ಧತೆಯ ಬಗ್ಗೆ ಚರ್ಚೆ ನಡೆಸಿದರು.