ಆಯಿಷಾ ಕರಾಟೆ ಚಾಂಪಿಯನ್
ಬಂಟ್ವಾಳ: ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಆರ್.ವಿ. ಟೈಗರ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯು ಮಡಂತ್ಯಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಸಿದ 2ನೇ ಇಂಟರ್ ಡೋಜೋ ಕರಾಟೆ ಚಾಂಪಿಯನ್ ಶಿಪ್ 2013ರ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ 31-34 ಕೆ.ಜಿ ಕುಮಿಟೆಯಲ್ಲಿ ಆಯಿಷಾ ಅಧೀನಾ ಪ್ರಥಮ ಸ್ಥಾನಪಡೆದಿದ್ದಾಳೆ. ಈಕೆ ಸೆನ್ಸಾಯಿ ವಸಂತ ಕೆ. ಬಂಗೇರರ ಶಿಷ್ಯೆ. ಬಂಟ್ವಾಳ ವಿದ್ಯಾಗಿರಿ ಎಸ್ವಿಎಸ್ ಆಂಗ್ಲಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ.