ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರ್ಪ್ ಬ್ಯಾಂಕ್ ಬಂಪರ್ ಕೊಡುಗೆ

Rashmi Kasaragodu
Updated On : 2 Mar 2013, 12:00 pm

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ಮೂರು ಕೊಡುಗೆ ರೂಪದ ಯೋಜನೆಗಳನ್ನು ಗ್ರಾಹಕರಿಗೆ ನೀಡಿದೆ.
  ಬಂಪರ್ ಕಾರ್ನಿವಲ್, ಕಾರ್ಪ್ ಗ್ಲೋಬಲ್ ಚಾಲ್ತಿ ಖಾತೆ, ಚಾಲ್ತಿ ಖಾತೆಯ ಪ್ರಿಮಿಯಂ ರೂಪಾಂತರ ಕಾರ್ಪ್ ಕಬ್ ಮತ್ತು ಕಾರ್ಪ್ ಪ್ರಿವಿಲೇಜ್ ಕೊಡುಗೆಗಳ ಯೋಜನೆಯನ್ನು ಪಾಂಡೇಶ್ವರದ ಪ್ರಧಾನ ಕಚೇರಿಯಲ್ಲಿ ಕಾರ್ಪ್ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಬಿಡುಗಡೆ ಮಾಡಿದರು.
 ಬಂಪರ್ ಕಾರ್ನಿವಲ್‌ನಲ್ಲಿ ಮಾರ್ಚ್‌ನಲ್ಲಿ 15ದಿನಗಳ ಕೊಡುಗೆಯಾಗಿದೆ. ಇದರಲ್ಲಿ ಕಾರು ಖರೀದಿದಾರರಿಗೆ 3 ದಿನದೊಳಗೆ 10.4 ಬಡ್ಡಿದರದಲ್ಲಿ ಸಾಲ ನೀಡಲಾಗುವುದು. 15 ದಿನಗಳಲ್ಲಿ 350 ಕೋಟಿ  ವಹಿವಾಟು ನಿರೀಕ್ಷೆ ಇದೆ ಎಂದರು.  ರಫ್ತು ಮತ್ತು ಆಮದುದಾರರಿಗೆ ವಿಶೇಷ ಅನುಕೂಲವಾಗಲು ಕಾರ್ಪ್ ಗ್ಲೋಬಲ್ ಚಾಲ್ತಿ ಖಾತೆ ಪರಿಚಯಿಸಲಾಗಿದೆ. ದೊಡ್ಡ ಮೊತ್ತದ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದು ಎಂದರು. ಮಹಾಪ್ರಬಂಧಕರಾದ ಕೆ.ರಾಮಮೂರ್ತಿ, ಪಿ.ರಾಜರಾಮ್ ಕಾರಂತ್, ಉಪಮಹಾಪ್ರಬಂಧಕ ಕುರಿಯನ್ ಪಿ.ಅಬ್ರಾಹಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement