ಬಾಲಕಿ ಅತ್ಯಾಚಾರ ಆರೋಪಿಗಳ ಸೆರೆ
ಮಂಗಳೂರು: ಮನೆ ಬಾಡಿಗೆಗೆ ಇದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ತಲಪಾಡಿ ಇಸ್ಮಾಯಿಲ್ (25)ಮತ್ತು ಕಾಸರಗೋಡು ರಹೀಂ (23)ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ನಲ್ಲಿ ತಲಪಾಡಿ ಇಸ್ಮಾಯಿಲ್ ಮನೆಯಲ್ಲಿ ತಾಯಿ ಮತ್ತು ಮಗಳು ವಾಸವಾಗಿದ್ದರು. ಮಂದ ಬುದ್ಧಿಯ ಬಾಲಕಿಯನ್ನು ಪುಸಲಾಯಿಸಿದ ಇಸ್ಮಾಯಿಲ್ ಕಾಸರಗೋಡಿನ ರಹೀಂ ಜತೆ ಸೇರಿಕೊಂಡು ಲಾಡ್ಜ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಆರೋಪಿಗಳು ತಲೆ ಮರೆಸಿಕೊಂಡಿದ್ದರು.