ಸುದ್ದಿ ಸಂಕ್ಷೇಪ
ಖಾಸಗಿ ವಿವಿಗಳಿಗೆ ಅನುಮತಿ: ನಾಳೆ ಎಬಿವಿಪಿ ಪ್ರತಿಭಟನೆ
ಮಂಗಳೂರು: ರಾಜ್ಯ 22 ವಿಶ್ವವಿದ್ಯಾಲಯವನ್ನು ಖಾಸಗೀಕರಣಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಬಾರದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂದು ಆಗ್ರಹಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಮಾ. 4 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಸರ್ಕಾರವು ವಿಧಾನ ಪರಿಷತ್ತಿನಲ್ಲಿ ಯಾವುದೇ ಚರ್ಚೆ, ಸಮೀಕ್ಷೆ, ಸಮಿತಿ ರಚನೆ ಮಾಡದೆ ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ತೆರೆಯಲು ಅನುಮತಿ ನೀಡಿರುತ್ತದೆ. ರಾಜ್ಯ ಸರ್ಕಾರ ಅನುಮತಿ ನೀಡಿರುವ 22 ವಿಶ್ವವಿದ್ಯಾಲಯಗಳಲ್ಲಿ 18 ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿದೆ. ಹಣ ಗಳಿಸುವ ಉದ್ದೇಶದಿಂದ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ ಎಂದು ಅಭಾವಿಪ ರಾಜ್ಯ ಕಾರ್ಯದರ್ಶಿ ರಮೇಶ್ ಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ರಾಜ್ಯಪಾಲರು ನೇಮಿಸಿರುವ ತನಿಖಾ ತಂಡ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ. ಮಹೇಶಪ್ಪ ಮೇಲಿನ ತನಿಖೆಯನ್ನು ಮೂರು ತಿಂಗಳಲ್ಲಿ ಮುಗಿಸುವ ಭರವಸೆ ನೀಡಿತ್ತು. ಆದರೆ ವರ್ಷ ಕಳೆದರೂ ತನಿಖೆ ಪೂರ್ಣಗೊಂಡಿಲ್ಲ. ರಾಜ್ಯಪಾಲರ ಮೇಲೆ ರಾಷ್ಟ್ರಪತಿ ತನಿಖೆ ನಡೆಸಲಿ ಎಂದರು.
ರೇಲ್ವೆ ಸುರಕ್ಷಾ ಸಪ್ತಾಹ
ಮಂಗಳೂರು: ದಕ್ಷಿಣ ರೈಲ್ವೆಯಿಂದ ವಾರ್ಷಿಕ ರೇಲ್ವೆ ಸುರಕ್ಷಾ ಸಪ್ತಾಹ ಮಾ.2ರಿಂದ 8ರವರೆಗೆ ನಡೆಯುತ್ತಿದ್ದು, ಫಾಲ್ಘಾಟ್ ರೇಲ್ವೆ ವಿಭಾಗದ ಪಾಲಕ್ಕಾಡ್ ಮತ್ತು ಕಣ್ಣೂರುಗಳಲ್ಲಿ ಕ್ವಿಜ್, ಪ್ರಬಂಧ ಸ್ಪರ್ಧೆ, ಪೋಸ್ಟರ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.