ಇಂದಿನಿಂದ 'ಹರ್ಷೋತ್ಸವ'
ಮಂಗಳೂರು: ಅಂತಾರಾಷ್ಟ್ರೀಯ ಬ್ರ್ಯಾಂಡಿನ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ನೀಡುವ ಸಲುವಾಗಿ ಸೋಮವಾರದಿಂದ ಮಾ. 10ರವರೆಗೆ ಉಡುಪಿ, ಮಂಗಳೂರು, ಪುತ್ತೂರು, ಕುಂದಾಪುರ, ಶಿವಮೊಗ್ಗದ 'ಹರ್ಷ' ಗೃಹೋತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ 'ಹರ್ಷೋತ್ಸವ' ನಡೆಯಲಿದೆ.
26ನೇ ವರ್ಷಾಚರಣೆಯಲ್ಲಿ ಆಕರ್ಷಕ ಕೊಡುಗೆ, ರಿಯಾಯಿತಿಗಳು, ಲಕ್ಕಿ ಡ್ರಾ, ಖಚಿತ ಉಡುಗೊರೆ ನೀಡಲಿದೆ. ಉತ್ತಮ ಬ್ರ್ಯಾಂಡ್‌ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್‌ಬಿ, ವರ್ಲ್‌ಫೂಲ್, ಪ್ಯಾನಸೋನಿಕ್, ತೋಶಿಬಾ, ಸ್ಯಾಮ್‌ಸಂಗ್, ವೀಡಿಯೋಕಾನ್ ಮೊದಲಾದ ಕಂಪನಿಗಳ ಗೃಹೋಪಕರಣಗಳು ಲಭ್ಯವಿದೆ. ರಿಯಾಯಿತಿ ದರ ನೀಡುವುದರ ಜತೆಗೆ ಖರೀದಿಸಿದ ಉಪಕರಣಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆಯಿದೆ.
ಲಕ್ಕಿ ಡ್ರಾದಲ್ಲಿ 100 ಮೈಕ್ರೋವೇವ್, 50 ಪ್ಯಾನಸೋನಿಕ್ ಆಟೋಮ್ಯಾಟಿಕ್ ಇಲೆಕ್ಟ್ರಿಕ್ ಕುಕ್ಕರ್ ಹಾಗೂ ಇನ್ನಿತರ ಆಕರ್ಷಣೀಯ ಬಹುಮಾನಗಳನ್ನು ಗೆಲ್ಲುವ ಅವಕಾಶ ಗ್ರಾಹಕರದ್ದು ಎಂದು ಹರ್ಷ ಮಾರ್ಕೆಟಿಂಗ್ ನಿರ್ದೇಶಕ ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--
ನಾಳೆಯಿಂದ 'ಯಕ್ಷಗಾನ ಸಪ್ತಾಹ'
ಮಂಗಳೂರು: ಬಂಟ್ವಾಳ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ವತಿಯಿಂದ ಮಾ. 5 ರಿಂದ 11ರ ತನಕ ಬಿ.ಸಿ.ರೋಡಿನ ಪದ್ಮನಾಭ ನಗರದಲ್ಲಿ 'ಯಕ್ಷಗಾನ ಸಪ್ತಾಹ' ನಡೆಯಲಿದೆ. ಕಾರ್ಯಕ್ರಮವನ್ನು ಸಂಜೆ 5ಕ್ಕೆ ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ಉದ್ಘಾಟಿಸುವರು.
ನಾಳೆಯಿಂದ ಚಲನಚಿತ್ರೋತ್ಸವ
ಮಂಗಳೂರು: ಭಾರತೀಯ ಸಿನಿಮಾ ರಂಗದ ಶತಮಾನೋತ್ಸವದ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಮಾ. 5 ರಿಂದ 8ರ ತನಕ ಚಲನಚಿತ್ರೋತ್ಸವ ನಡೆಯಲಿದೆ. 5ರಂದು ಸಂಜೆ 4ಕ್ಕೆ ಚಿತ್ರೋತ್ಸವವನ್ನು ನಿರ್ದೇಶಕ ಸದಾನಂದ ಸುವರ್ಣ ಉದ್ಘಾಟಿಸುವರು.
--