ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ನಾಳೆ ಬೆಳಗ್ಗಿನಿಂದ ಕ್ಷೇತ್ರ ಬಿಟ್ಹೋಗಿ'

Lingaraj Badiger
Updated On : 4 Mar 2013, 12:39 pm

ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಅಭ್ಯರ್ಥಿಗಳು ಮಾ.5 ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭಗೊಳ್ಳುವ ಮಾ.7ರವರೆಗೆ ಸಾರ್ವಜನಿಕ ಸಭೆ, ಬಹಿರಂಗ ಪ್ರಚಾರ, ಟಿ.ವಿ, ಪತ್ರಿಕೆ, ರೇಡಿಯೋ ಮಾಧ್ಯಮಗಳಲ್ಲಿ ಮಾತುಕತೆ ನಡೆಸಬಾರದೆಂದು ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ.
ಅಲ್ಲದೆ ರಾಜಕೀಯ ಪಕ್ಷದ ಮುಖಂಡರು, ತಾರಾ ಪ್ರಚಾರಕರು, ಮತದಾನ ವಾರ್ಡಿನ ಮತದಾರರಲ್ಲದ ಏಜೆಂಟರು ಬೆಳಗ್ಗೆ 7 ಗಂಟೆಯೊಳಗೆ ವಾರ್ಡ್ ವ್ಯಾಪ್ತಿಯಿಂದ ದೂರ ಸರಿಯಬೇಕು. ನೀತಿ ಸಂಹಿತೆ ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

60ಕ್ಕೆ 60 ಸ್ಥಾನ ಯಾಕೆ ಗೆಲ್ಲಬಾರದು?
ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 50 ಸ್ಥಾನ ಗೆಲ್ಲುವ ವಿಶ್ವಾಸ, ಮತ್ತೂ ಪ್ರಶ್ನಿಸಿದರೆ 60ಕ್ಕೆ 60 ಸ್ಥಾನವನ್ನೂ ಯಾಕೆ ಗೆಲ್ಲಬಾರದು?
ಇದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಸುದ್ದಿಗಾರರಿಗೆ ಹಾಕಿದ ಮರು ಪ್ರಶ್ನೆ.
ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಭಾನುವಾರ ಕರೆದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಉರುಹೊಡೆದ ರಮಾನಾಥ ರೈ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗೆ ತೊಂದರೆಯಾಗಿಲ್ಲ. ಬಿಜೆಪಿ ಬಡವರಿಗೆ ರೇಷನ್ ಕಾರ್ಡ್ ನೀಡಿಲ್ಲ, ಮನೆ ಒದಗಿಸಿಲ್ಲ, ರಂಗಮಂದಿರ ನಿರ್ಮಿಸಿಲ್ಲ, ಮಂಗಳಾ ಕಾರ್ನಿಶ್ ಆಗಿಲ್ಲ, ಸ್ಕೈಬಸ್ ಮಾಡಿಲ್ಲ ಹೀಗೆ ಇಲ್ಲಗಳ ಪಟ್ಟಿ ಹೇಳುತ್ತಾ ಹೋದರು. ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಮೇಯರ್‌ಗಳು ಕೆಟ್ಟ ಹೆಸರು ತಂದಿಲ್ಲ ಎಂದೂ ಹೇಳಿದರು. ಬಿಜೆಪಿಗೆ ಭ್ರಷ್ಟಾಚಾರವೇ ಮುಳುವಾಗಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನರ್ಮ್ ಯೋಜನೆ ಜಾರಿಗೆ ತಂದು ನಗರಾಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement