ಪುತ್ತೂರು: ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಪುತ್ತೂರು: ಪುತ್ತೂರು ಪುರಸಭಾ ಚುನಾವಣಾ ಪ್ರಣಾಳಿಕೆಯನ್ನು ಶಾಸಕಿ ಮಲ್ಲಿಕಾಪ್ರಸಾದ್ ಬುಧವಾರ ಬಿಡುಗಡೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ತೂರಿನಲ್ಲಿ ನೀರಿನ ವ್ಯವಸ್ಥೆ, ಜನ ಸಾಮಾನ್ಯರ ತೆರಿಗೆಯ ಒತ್ತಡವನ್ನು ಕಡಿಮೆಗೊಳಿಸುವಂತಹ ಹಲವಾರು ಕಾರ್ಯಗಳನ್ನು ಮಾಡುವ ಮೂಲಕ ಉತ್ತಮವಾದ ಜನಪರ ಕೆಲಸಗಳನ್ನು ಮಾಡಿದೆ ಎಂದರು.
ಬಿಜೆಪಿ ಮುಖಂಡ ಪುರಸಭಾ ಚುನಾವಣಾ ಉಸ್ತುವಾರಿ ವಿಶ್ವೇಶ್ವರ್ ಭಟ್ ಬಂಗಾರಡ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಮಾತನಾಡಿದರು. ಪತ್ರಿಕಾ ಬಿಜೆಪಿ ಚುನಾವಣಾ ಉಸ್ತುವಾರಿ ಅಪ್ಪಯ್ಯ ಮಣಿಯಾಣಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಇದ್ದರು.
ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ,ಕಾರ್ಯಕರ್ತರು ಸೋಮವಾರ ಜೆಡಿಎಸ್ಗೆ ಸೇರ್ಪಡೆಗೊಂಡಿದ್ದಾರೆ.
ಕಂಬಳ ವಾರ್ಡಿನ ಸುರೇಶ್ ಕುಮಾರ್ ನೇತೃತ್ವದ ಅರುಣ್ ಕಾಮತ್, ಸುರೇಶ್ ಕಾಮತ್, ರವೀಂದ್ರ ಬೆಳ್ಚಡ, ವಿಷ್ಣುಮೂರ್ತಿ, ಇನ್ನಿತರರು ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಂಡರು. ಪಕ್ಷದ ಧ್ವಜವನ್ನು ನೀಡುವ ಮೂಲಕ ಜೆಡಿಎಸ್ ನಾಯಕ ಸದಾನಂದ ಶೆಟ್ಟಿ ಸ್ವಾಗತಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ. ನಾಗರಾಜ ಶೆಟ್ಟಿ ಮತ್ತಿತರರು ಹಾಜರಿದ್ದರು.