ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಜಿರೆಯಲ್ಲಿ ಶ್ರೀಮದ್ಭಗವದೀತಾ ಪ್ರವಚನ

Lingaraj Badiger
Updated On : 5 Mar 2013, 11:53 am

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಫೆ. 27ರಿಂದ ಮಾ.4ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ 5 ದಿನಗಳ ಶ್ರೀಮದ್ಭಗವದೀತಾ ಪ್ರವಚನ ಮಾಲಿಕೆಯನ್ನು ಫೆ.27ರಂದು ಸುದರ್ಶನ ವೇದಿಕೆಯಲ್ಲಿ ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಆರಂಭಿಸಿದರು.
ಪ್ರಪಂಚದಲ್ಲಿ ಆಯಾ ಗುಣಧರ್ಮಗಳಿಗೆ ಅನುಸಾರವಾಗಿ ಚಾತುರ್ವಣ್ಯಗಳ ಸೃಷ್ಟಿಯಾಗಿದೆ. ಭಗವದ್ಗೀತೆಯಲ್ಲಿ ಜಾತಿವಾದದ ಬಗೆಗೆ ಯಾವುದೇ ಪ್ರಸ್ತಾಪವಿಲ್ಲ. ಯಾವುದೇ ಪುರಾಣಗಳಲ್ಲಿ ಬ್ರಾಹ್ಮಣ, ವೈಶ್ಯ, ಶೂದ್ರರೆಂಬ ವರ್ಣಭೇದದ ಉಲ್ಲೇಖಗಳಿಲ್ಲ. ವರ್ಣ ಎಂದರೆ ಯಾವುದೇ ಜಾತಿ ಯಾವುದೇ ವರ್ಗ, ಯಾವುದೇ ಅಂತಸ್ತು ಹಾಗೂ ಯಾವುದೇ ವರ್ಗವಲ್ಲ ಎಂದವರು ಉದಾಹರಿಸಿದರು.
ಪ್ರಸ್ಥಾನತ್ರಯಗಳಲ್ಲಿ ಭಗವದ್ಗೀತೆಯು ಒಂದು. ಜಗತ್ತೇ ವಿಷಾದಮಯದಿಂದ ಕೂಡಿದುದಾಗಿದೆ ಎಂದರು. ಡಾ. ಶ್ರೀಧರ ಭಟ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement