ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಶಾಶ್ವತ ಪರಿಹಾರ: ಅಶ್ವನಿ ಕುಮಾರ್ ರೈ
ಬಂಟ್ವಾಳ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಜೀಪನಡುವಿನ ಕಂಚಿನಡ್ಕ ಪದವಿನಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಸಾಧಕ ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ, ಹಲವು ವರ್ಷಗಳಿಂದ ಇಲ್ಲಿನ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾದ ತ್ಯಾಜ್ಯ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಹೇಳಿದರು. ಬಿ.ಸಿ. ರೋಡಿನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಕ್ಷ ಪ್ರಮುಖರಾದ ನೋಣಯ್ಯ ಪೂಜಾರಿ, ಸ್ಟೀವನ್, ಹರಿಪ್ರಸಾದ್, ಡಾಲ್ಫಿ ಡಿಸೋಜಾ, ಮಹಮ್ಮದ್ ವಳವೂರು, ಉಮ್ಮರ್ ಫಾರೂಕ್, ಅರುಣ್ ರೋಶನ್ ಡಿಸೋಜಾ ಉಪಸ್ಥಿತರಿದ್ದರು.