ಜೆರಾಕ್ಸ್, ಸೈಬರ್ ಮಾಲೀಕರ ಸಂಘ ಅಸ್ತಿತ್ವಕ್ಕೆ
ಮಂಗಳೂರು: ಜೆರಾಕ್ಸ್ ಮತ್ತು ಸೈಬರ್ ರಂಗದಲ್ಲಿ ಏಕರೂಪ ದರ ಕಾಯ್ದುಕೊಳ್ಳುವ ಸಲುವಾಗಿ ಮಂಗಳೂರಿನಲ್ಲಿ ದ.ಕ.ಜಿಲ್ಲಾ ಜೆರಾಕ್ಸ್ ಮತ್ತು ಸೈಬರ್ ಮಾಲಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ಶನಿವಾರ ನಗರದ ವುಡ್ಲ್ಯಾಂಡ್ ಹೊಟೇಲ್ನಲ್ಲಿ ಕವಿ ಚಂದ್ರಶೇಖರ ಬೋಳೂರು ಅಧ್ಯಕ್ಷತೆಯಲ್ಲಿ ನಡೆದ ಜೆರಾಕ್ಸ್ ಮಾಲಕರ ಸಮಾವೇಶದಲ್ಲಿ ಹೊಸ ಸಂಘವನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಕಾರ್ಯದರ್ಶಿಯಾಗಿ ತುಲಾರ್ ರೈ, ಕೋಶಾಧಿಕಾರಿ ರಾಜೇಶ್ವರಿ ಹಾಗೂ 15 ಮಂದಿ ಸದಸ್ಯರನ್ನು ಆರಿಸಲಾಯಿತು. ಸುಮಾರು 20ಕ್ಕೂ ಅಧಿಕ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳಿದ್ದು, ಸುಮಾರು 80 ಮಂದಿ ಸಭೆಗೆ ಹಾಜರಾಗಿದ್ದರು. ಜೆರಾಕ್ಸ್ ಉದ್ದಿಮೆ ಎಂದರೆ 50 ಪೈಸೆಗೆ ಎನ್ನುವಂತಾಗಿದೆ. ಸಾಮಾನ್ಯವಾಗಿ ಪುಟವೊಂದಕ್ಕೆ 1 ರುಪಾಯಿ ಬದಲು ಕೆಲವು ಕಡೆಗಳಲ್ಲಿ ರು. 2 ವಸೂಲಿ ಮಾಡುತ್ತಿದ್ದಾರೆ. ಏಕರೂಪದ ದರಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜೆರಾಕ್ಸ್ ಹಾಗೂ ಸೈಬರ್ ಉದ್ಯಮಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದ್ದು, ಸ್ಪಧಾತ್ಮಕ ಯುಗದಲ್ಲಿ ಯಾವ ರೀತಿ ದರ ನಿರ್ಧರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.