ಅವಳಿ ಕಿರುಚಿತ್ರ ಬಿಡುಗಡೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ 'ಹಿಂಬಾಲಿಸುವೆಯಾ? 3ಡಿ' ಚಲನಚಿತ್ರ ಹಾಗೂ ಜೀವನಂ ಕಿರುಮೂಕಿ ಚಿತ್ರವನ್ನು ಸಂಗೀತ ನಿರ್ದೇಶಕ, ನೃತ್ಯ ಗುರು ರಾಜೇಶ್ ಭಟ್ ಬಿಡುಗಡೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಮಾಧವ ಭಟ್ ಅಧ್ಯಕ್ಷತೆ ವಹಿಸಿದ್ದರು. 'ಹಿಂಬಾಲಿಸುವೆಯಾ?' ಸಿನೆಮಾ ನಿರ್ದೇಶಕ ಪ್ರಸಾದ್ ಆಚಾರ್ಯ, ಜೀವನಂ ಸಿನೆಮಾ ನಿರ್ದೇಶಕ ಪ್ರದೀಪ್ ಕೊಡಿಂಬಾಡಿ, ಸಿನೆಮಾದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಮಂಜುನಾಥ್ ಎಲ್.ಕೆ, ರಾಜೇಶ್ ಪಲ್ಲತ್ತಾರು ಸಹ ನಿರ್ದೇಶಕ ಪುನೀತ್ ಇದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಪ್ರಸ್ತಾವಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಸ್ವಾತಿ ವಂದಿಸಿದರು.