ಉಚಿತ ಆನ್ಲೈನ್ ಪರೀಕ್ಷೆ
ಮಂಗಳೂರು: ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಪ್ರಿಪರೇಟರಿ ಪರೀಕ್ಷೆಯನ್ನು ಎಕ್ಸಾಮ್ಸ್ 24್ಗ7 ಡಾಟ್ ಕಾಮ್ ನಡೆಸಲಿದೆ. ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸಂಸ್ಥೆಯ ಜನರಲ್ ಮೆನೇಜರ್ ಅಶೋಕ್ ಶೆಣೈ, ಈ ಪರೀಕ್ಷೆ ಮಾ.20ರ ವರೆಗೆ ನಡೆಯಲಿದೆ. 20 ಮಂದಿ ಹಿರಿಯ ಪ್ರಾಧ್ಯಾಪಕರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರಗಳ ಪ್ರಶ್ನೆ ಪತ್ರಿಕೆ ತಯಾರಿಸಿದ್ದಾರೆ. ನೂತನ ಸಾಪ್ಟ್ವೇರ್ನಿಂದ ವಿದ್ಯಾರ್ಥಿಗಳಿಗೆ ಸಿಗುವಂತೆ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ ಬೇಕಾದ ವಿಷಯ ಆಯ್ದು ಪರೀಕ್ಷೆ ಬರೆಯಬಹುದು. 3 ಗಂಟೆ ಪರೀಕ್ಷೆಯಾಗಿದ್ದು, ಬಳಿಕ ಪ್ರತ್ಯೊಂದು ಪ್ರಶ್ನೆಗೆ ಸರಿಯಾದ ಉತ್ತರ ನೀಡಲಾಗುವುದು ಎಂದರು. ವಿವರಕ್ಕೆ 7760077722ನ್ನು ಸಂಪರ್ಕಿಸಬಹುದು.