ಲವ್ ಜಿಹಾದ್: ವಿಸ್ತೃತ ತನಿಖೆಗೆ ಆಗ್ರಹ
ಮಂಗಳೂರು: ಹಿಂದೂ ಯುವತಿಯರ ಅಪಹರಣ ಮತ್ತು ಲವ್ ಜಿಹಾದ್ಗೆ ಸಂಬಂಧಿಸಿದಂತೆ ಆಳವಾದ ತನಿಖೆ ನಡೆಸುವಂತೆ ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಶಾಖೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2005ರಿಂದ 2010ರವರೆಗೆ ನಾಪತ್ತೆಯಾದ ಅಮಾಯಕ ಹಿಂದೂ ಯುವತಿಯರ ಹಾಗೂ ಮಹಿಳೆಯರ ಒಟ್ಟು 242 ನಾಪತ್ತೆ ಪ್ರಕರಣ ಪೈಕಿ 222 ಪ್ರಕರಣ ಮಾತ್ರ ಪತ್ತೆಯಾಗಿದೆ. ಆದ್ದರಿಂದ ಪುತ್ತೂರಿನ ಅಂಕತಡ್ಕ ಪ್ರಕರಣದಲ್ಲಿ ಬಂಧಿತರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕು. ಯುವತಿ ನಾಪತ್ತೆಯಾಗಿದ್ದರೂ ದೂರು ನೀಡದ ಪೊಷಕರಿದ್ದರೆ ಇನ್ನಾದರೂ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಮಿತಿ ಹೇಳಿಕೆಯಲ್ಲಿ ವಿನಂತಿ ಮಾಡಿದೆ.