ಲವ್ ಜಿಹಾದ್: ವಿಸ್ತೃತ ತನಿಖೆಗೆ ಆಗ್ರಹ
ಮಂಗಳೂರು: ಹಿಂದೂ ಯುವತಿಯರ ಅಪಹರಣ ಮತ್ತು ಲವ್ಜಿಹಾದ್ಗೆ ಸಂಬಂಧಿಸಿ ಆಳವಾದ ತನಿಖೆ ನಡೆಸುವಂತೆ ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಶಾಖೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ದ.ಕ.ಜಿಲ್ಲೆಯಲ್ಲಿ 2005ರಿಂದ 2010ರ ವರೆಗೆ ನಾಪತ್ತೆಯಾದ ಅಮಾಯಕ ಹಿಂದೂ ಯುವತಿಯರ ಹಾಗೂ ಮಹಿಳೆಯರ ಒಟ್ಟು 242 ನಾಪತ್ತೆ ಪ್ರಕರಣ ಪೈಕಿ 222 ಪ್ರಕರಣ ಮಾತ್ರ ಪತ್ತೆಯಾಗಿದೆ. 8 ಪ್ರಕರಣ ಪತ್ತೆಯಾಗದೆ ಕೈಬಿಡಲಾಗಿದೆ. 13 ಪ್ರಕರಣ ಪತ್ತೆಗೆ ಬಾಕಿ ಇರುವುದಾಗಿ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಪತ್ತೆ ಮಾಡಿದ 222 ಪ್ರಕರಣದಲ್ಲಿ ಇಸ್ಲಾಂಗೆ ಮತಾಂತರಗೊಂಡ ಇಬ್ಬರು ಹಿಂದೂ ಯುವತಿಯರ ಪ್ರಕರಣಗಳೂ ಸೇರಿದ್ದು, ಅಂಥ ಕುಟುಂಬಗಳು ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಗೆ ದೂರು ನೀಡುವುದಿಲ್ಲ. ನಂತರದ ದಿನಗಳಲ್ಲೂ ಲವ್ಜಿಹಾದ್ಗೆ ಸಿಲುಕಿ ಯುವತಿಯರು ನಾಪತ್ತೆಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಆದ್ದರಿಂದ ಪುತ್ತೂರಿನ ಅಂಕತಡ್ಕ ಪ್ರಕರಣದಲ್ಲಿ ಬಂಧಿತರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕು. ಯುವತಿ ನಾಪತ್ತೆಯಾಗಿದ್ದರೂ ದೂರು ನೀಡದ ಪೊಷಕರಿದ್ದರೆ ಇನ್ನಾದರೂ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಮಿತಿ ಹೇಳಿಕೆಯಲ್ಲಿ ವಿನಂತಿ ಮಾಡಿದೆ.
ಸ್ಟುಡಿಯೊಗೆ ನುಗ್ಗಿ
ಕ್ಯಾಮೆರಾ ಕಳವು
ಮಂಗಳೂರು: ಕಪಿತಾನಿಯೋ ಸ್ಟುಡಿಯೊಗೆ ನುಗ್ಗಿದ ಕಳ್ಳರು ವೀಡಿಯೋ, ಫೋಟೋ ಕ್ಯಾಮೆರಾ, ಸ್ಕ್ಯಾನರ್ ಸಹಿತ 1.25 ಲಕ್ಷ ಮೌಲ್ಯದ ಸೊತ್ತು ಕಳವು ಮಾಡಿದ್ದಾರೆ. ಮಾಲೀಕ ರಮೇಶ್ ಅಡ್ಯಾರ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ರಾತ್ರಿ, ಬುಧವಾರ ಬೆಳಗ್ಗಿನ ನಡುವೆ ಬಾಗಿಲು ಒಡೆದು ಒಳ ನುಗ್ಗಿ ಕಳವು ಮಾಡಿದ್ದಾರೆ.