ಕುತ್ಯಾರು: ನಾಳೆ ಸೇವೆ ಬಯಲಾಟ
ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀದುರ್ಗಾಪರಮೇಶ್ವರಿ ಬಯಲಾಟ ಸಮಿತಿ ವತಿಯಿಂದ 30ನೇ ವರ್ಷದ ಸೇವೆ ಬಯಲಾಟ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾ.9ರಂದು ನಡೆಯಲಿದೆ ಎಂದು ಸಂಚಾಲಕ ಆನಂದರಾವ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.9ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸರ್ಕಾರಿ ಪ್ರ.ದ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಕೆ.ಗಣಪತಿ ಭಟ್ ಕುಳಮರ್ಮ ವಹಿಸಲಿದ್ದಾರೆ. ಹಿರಿಯ ಭಾಗವತ ಕುಬಣೂರು ಶ್ರೀಧರ ರಾವ್ ಅವರನ್ನು ಸನ್ಮಾನಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಪಿ.ಜಗನ್ನಾಥ್, ಕೋಶಾಧಿಕಾರಿ ಅನಂತಕೃಷ್ಣ, ಸ್ಥಾಪಕ ಸದಸ್ಯ ಡಾ.ಕೆ.ಜಿ. ಫಣಿಕ್ಕರ್ ಇದ್ದರು.