ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪುತ್ತೂರು; ಮಹಿಳೆಯರೇ ಅಧಿಕ

Lingaraj Badiger
Updated On : 8 Mar 2013, 11:13 am

ಪುತ್ತೂರು: ಪುತ್ತೂರು ಪುರಸಭೆಯ 27 ವಾರ್ಡ್‌ಗಳಿಗೆ ಗುರುವಾರ ನಡೆದ ಚುನಾವಣೆಯು ಶಾಂತಿಯುತವಾಗಿ ಮುಗಿದಿದ್ದು, ಇಲ್ಲಿ ಶೇ. 71.23 ಮತದಾನವಾಗಿದೆ.
ಪುತ್ತೂರು ಪುರಸಭಾ ಚುನಾವಣೆಯಲ್ಲಿ 34,382 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಈ ಪೈಕಿ ಒಟ್ಟು 24,489 ಮಂದಿ ಮತದಾನ ಮಾಡಿದ್ದು, 12433 ಮಹಿಳೆಯರು ಮತ್ತು 12,056 ಪುರಷರು ಮತದಾನ ಮಾಡಿದ್ದಾರೆ.
ಬೆಳಗ್ಗಿನ ವೇಳೆಯಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಅಪರಾಹ್ನದ ವೇಳೆಗೆ ಅಲ್ಪ ಮಟ್ಟಿಗೆ ಹೆಚ್ಚಳವಾಯಿತು.
27 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಒಟ್ಟು 88 ಅಭ್ಯರ್ಥಿಗಳ ಭವಿಷ್ಯ ಇದೀಗ ಚುನಾವಣಾ ಪೆಟ್ಟಿಗೆಯಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 17 ಆಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರೆ, 18 ಕ್ಷೇತ್ರಗಳಲ್ಲಿ ಜೆಡಿಎಸ್, 10 ಕ್ಷೇತ್ರಗಳಲ್ಲಿ ಎಸ್‌ಡಿಪಿಐ, ಒಂದು ಕ್ಷೇತ್ರದಲ್ಲಿ ಸಿಪಿಐಎಂ ಮತ್ತು 5 ಕ್ಷೇತ್ರಗಳಲ್ಲಿ ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದು, ಜನಾದೇಶ ಪಡೆದುಕೊಂಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆ, ಮತದಾರರ ಪಟ್ಟಿಯಲ್ಲಿ ಹೆಸರು ಮಾಯ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ವಿಚಾರಗಳಿಗೆ ಸಂಬಂಧಿಸಿ ಮತದಾರರಿಗೆ ಸಣ್ಣ ಪುಟ್ಟ ಸಮಸ್ಯೆಗಳಾಯಿತು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಪತ್ನಿ ಡಾಟಿ ಸದಾನಂದ ಗೌಡ ಅವರೊಂದಿಗೆ ಆಗಮಿಸಿ ಪುತ್ತೂರು ಪುರಸಭೆಯ ಹಾರಾಡಿ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಬೊಳುವಾರು ಮತಗಟ್ಟೆಯಲ್ಲಿ ಮತದಾನ ಮಾಡಿದರು.
--
ಬೆಳ್ತಂಗಡಿ
ಪ.ಪಂ: ಶೇ. 76 ಮತದಾನ
ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಶಾಂತ ರೀತಿಯಿಂದ ನಡೆದಿದ್ದು, ಶೇ. 76ರಷ್ಟು ಮತದಾನವಾಗಿದೆ.
11ವಾರ್ಡ್‌ಗಳಲ್ಲಿ 11 ಮತಗಟ್ಟೆಗಳಿದ್ದವು. 1ನೇ ವಾರ್ಡ್‌ನಲ್ಲಿ 77, 2ನೇ ವಾರ್ಡ್‌ನಲ್ಲಿ 77.54, 3ನೇ ವಾರ್ಡ್‌ನಲ್ಲಿ 72.55, 4ನೇ ವಾರ್ಡ್‌ನಲ್ಲಿ 66.98, 5ರಲ್ಲಿ 76.36, 6ರಲ್ಲಿ 73.25, 7ರಲ್ಲಿ 71.19, 8ರಲ್ಲಿ 79.54, 9ರಲ್ಲಿ 82.02, 10ರಲ್ಲಿ 81.36, 11ರಲ್ಲಿ 69ರಷ್ಟು ಮತದಾನವಾಗಿದೆ.
2611 ಪುರುಷ ಮತದಾರರ ಪೈಕಿ 1943 ಮಂದಿ, 2713 ಮಹಿಳಾ ಮತದಾರರ ಪೈಕಿ 2126 ಮಂದಿ ಮತದಾನ ಮಾಡಿದ್ದಾರೆ. 9ನೇ ವಾರ್ಡ್‌ನಲ್ಲಿ ಅತ್ಯಧಿಕ ಮತದಾನವಾಗಿದೆ. 4ನೇ ವಾರ್ಡ್‌ನಲ್ಲಿ ಕನಿಷ್ಠ ಮತದಾನವಾಗಿದೆ.
ಮಧ್ಯಾಹ್ನದವರೆಗೆ ಬಿರುಸಿನ ಮತದಾನ ನಡೆದಿದ್ದು, ಶಾಸಕ ವಸಂತ ಬಂಗೇರ ವಾರ್ಡ್ 1ರ ಮತಗಟ್ಟೆ ಸಂತ ಥೇರಸಾ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement