ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಗು ಅಪಹರಣ ಯತ್ನ; ಸಾರ್ವಜನಿಕರಿಂದ ಗೂಸಾ

Lingaraj Badiger
Updated On : 8 Mar 2013, 11:24 am

ಉಪ್ಪಿನಂಗಡಿ: ತಾಯಿಯ ಕೈಯಲ್ಲಿದ್ದ ಒಂದು ವರ್ಷದ ಮಗುವೊಂದನ್ನು ಅಪರಿಚಿತನೊಬ್ಬ ಪರಿಚಿತನಂತೆ ನಟಿಸಿ ಮಗುವನ್ನು ಎತ್ತಿಕೊಂಡು ಆಟವಾಡಿಸುವ ನೆಪದಲ್ಲಿ ಮಗು ಅಪಹರಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ನಡೆದಿದೆ. ಪೆರಿಯಡ್ಕ ಮನೆ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪತ್ನಿ ತಮ್ಮ ಒಂದು ವರ್ಷದ ಮಗು ಸಜಿನಾಳೊಂದಿಗೆ ಉಪ್ಪಿನಂಗಡಿ ಅಂಚೆ ಕಚೇರಿ ಬಳಿ ನಿಂತಿದ್ದರು. ಆ ವೇಳೆ ಅಂಚೆ ಕಚೇರಿಗೆ ಬಂದ ಸುನಿಲ್ ಅಲಿಯಾಸ್ ಭವಾನಿ ಶಂಕರ್ ಎಂಬಾತ ಮಗುವನ್ನು ಮುದ್ದಿಸುವಂತೆ ವರ್ತಿಸುತ್ತಿದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡ ಭೀತಿಗೊಂಡ ಮಹಿಳೆ ಜೋರಾಗಿ ಕೂಗಿದರು. ಸ್ಥಳೀಯ ನಾಗರಿಕರು ವಿಚಾರ ತಿಳಿದು, ಶೋಧ ನಡೆಸಿದಾಗ ಆತ ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣ ಬಳಿಯ ಅಂಗಡಿಯೊಂದರಲ್ಲಿ ಮಗುವಿಗೆ ಚಾಕಲೇಟ್ ತೆಗೆದುಕೊಳ್ಳುತ್ತಿದ್ದುದು ಕಂಡುಬಂತು.
 ಆಕ್ರೋಶಿತ ನಾಗರಿಕರು ಮಗುವನ್ನು ತೆಗೆದುಕೊಂಡು ಆತನಿಗೆ ಥಳಿಸಿದರು. ಆತ ಯಾವ ಉದ್ದೇಶಕ್ಕಾಗಿ ಮಗುವನ್ನು ಕರೆದೊಯ್ದ ಎಂಬ ಬಗ್ಗೆ ಸಂಶಯ ಮೂಡಿದೆ. ಸದ್ಯ ಪೊಲೀಸರ ವಶದಲ್ಲಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement