ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೇಸಿಗೆ ವಿಶೇಷ ರೈಲಿಗೆ ನಾಳೆಯಿಂದ ಬುಕ್ಕಿಂಗ್ ಆರಂಭ

Rashmi Kasaragodu
Updated On : 9 Mar 2013, 12:09 pm

ಕ.ಪ್ರ.ವಾರ್ತೆ  ಮಂಗಳೂರು  ಮಾ.8-
ಬೇಸಗೆಯ ಪ್ರಯಾಣಿಕರ ದಟ್ಟಣೆ ಸಲುವಾಗಿ ದಕ್ಷಿಣ ರೇಲ್ವೆ ಏಪ್ರಿಲ್ನಿಂದ ಜೂನ್ವರೆಗೆ 3 ತಿಂಗಳ ಕಾಲ ಹೆಚ್ಚುವರಿ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದೆ. ರಿಸರ್ವೇಷನ್ ಸೌಲಭ್ಯ ಮಾ.10ರಿಂದಲೇ ಶುರುವಾಗಲಿದೆ.
ಚೆನ್ನೈ ಸೆಂಟ್ರಲ್-ಮಡ್ಗಾಂವ್ ವೀಕ್ಲಿ ಎಕ್ಸ್ಪ್ರೆಸ್ (ನಂ.06001) ಮೇ 5 ಮತ್ತು ಜೂ.9ರಂದು ಪ್ರತಿ ಭಾನುವಾರ ಬೆಳಗ್ಗೆ 10.10ಕ್ಕೆ ಚೆನ್ನೈನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 10.30ಕ್ಕೆ ಗೋವಾ ತಲುಪಲಿದೆ. ರೈಲು ನಂ.06002 ಮಡ್ಗಾಂವ್ನಿಂದ ಮೇ.6 ರಿಂದ ಜೂ.10ರಂದು ಪ್ರತಿ ಸೋಮವಾರ ಮಧ್ಯಾಹ್ನ 1.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.30ಕ್ಕೆ ಚೆನ್ನೈ ತಲುಪಲಿದೆ.
ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ ರೈಲು ನಂ.07313 ಏ.4ರಿಂದ ಜೂ.29ರವರೆಗೆ ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರ ಮಧ್ಯಾಹ್ನ 2.10ಕ್ಕೆ ಚೆನ್ನೈನಿಂದ ಸಂಚರಿಸಲಿದೆ. ರೈಲು ನಂ.07314 ಏ.3ರಿಂದ ಜೂ.28ರ ವರೆಗೆ ಭಾನುವಾರ, ಬುಧವಾರ, ಶುಕ್ರವಾರಗಳಂದು ಹುಬ್ಬಳ್ಳಿಯಿಂದ ರಾತ್ರಿ 8.20ಕ್ಕೆ ಹೊರಡಲಿದೆ. ಯಶವಂತಪುರ-ಎರ್ನಾಕುಲಂ ರೈಲು ನಂ.06543 ಏ.7ರಿಂದ ಜೂ.23ರ ವರೆಗೆ ಪ್ರತಿ ಭಾನುವಾರ ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 12.15ಕ್ಕೆ ಎರ್ನಾಕುಲಂ ತಲುಪಲಿದೆ. ರೈಲು ನಂ.06544 ಎರ್ನಾಕುಲಂನಿಂದ ಏ.8ರಿಂದ ಜೂ.24ರ ವರೆಗೆ ಪ್ರತಿ ಸೋಮವಾರ ಹೊರಟು ಯಶವಂತಪುರಕ್ಕೆ ಸಂಜೆ 3.30ಕ್ಕೆ ತಲುಪಲಿದೆ. ಎರ್ನಾಕುಲಂ-ಚೆನ್ನೈ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ರೈಲು ಏ.11ರಿಂದ, ಕೊಯಂಬತ್ತೂರ್-ಚೆನ್ನೈ ಸೆಂಟ್ರಲ್ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ಏ.16ರಿಂದ, ಚೆನ್ನೈ ಸೆಂಟ್ರಲ್-ಟ್ಯುಟಿಕೊರಿನ್ ಪಾಕ್ಷಿಕ ಸ್ಪೆಷಲ್ ರೈಲು ಏ.25ರಿಂದ ಸಂಚರಿಸಲಿದೆ ಎಂದು ಪಾಲ್ಘಾಟ್ ರೇಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement